BREAKING : Hyderabad to Bengaluru Bus Fire Accident Today ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನಟೆಕೋರು ಗ್ರಾಮದ ಬಳಿ ಭೀಕರ ದುರಂತ ಸಂಭವಿಸಿದೆ.

BREAKING: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನಟೆಕೋರು ಗ್ರಾಮದ ಬಳಿ ಭೀಕರ ದುರಂತ ಸಂಭವಿಸಿದೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಕಾವೇರಿ ಸ್ವೀಪರ್ ಬಸ್ಗೆ ಬೆಂಕಿ ಹೊತ್ತಿಕೊಂಡು 20ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿದ್ದಾರೆ.
ಘಟನೆ ವಿವರ
ಇಂದು (ಅಕ್ಟೋಬರ್ 24) ಬೆಳಗಿನ ಜಾವ ಸುಮಾರು 3 ಗಂಟೆಯ ಸಮಯದಲ್ಲಿ ಈ ದುರಂತ ಸಂಭವಿಸಿದೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಕರ್ನೂಲ್ ಜಿಲ್ಲೆಯ ಚಿನ್ನಟೆಕೋರು ಗ್ರಾಮದ ಬಳಿ ಏಕಾಏಕಿ ಬೆಂಕಿಗೆ ಆಹುತಿಯಾಯಿತು.
ಬಸ್ ಕ್ಷಣಾರ್ಧದಲ್ಲಿ ಧಗಧಗ ಹೊತ್ತಿ ಉರಿದಿದ್ದು, ಪ್ರಯಾಣಿಕರು ಹೊರಬರಲು ಹರಸಾಹಸ ಪಟ್ಟಿದ್ದಾರೆ.
ಪ್ರಯಾಣಿಕರ ಸ್ಥಿತಿ ಗಂಭೀರ
ಬಸ್ನಲ್ಲಿ ಒಟ್ಟು 42 ಪ್ರಯಾಣಿಕರಿದ್ದರು.
ಅವರಲ್ಲಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಇನ್ನೂ 15ಕ್ಕೂ ಹೆಚ್ಚು ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲವರು ಎಮರ್ಜೆನ್ಸಿ ಡೋರ್ನಿಂದ ಪಾರಾಗಲು ಯಶಸ್ವಿಯಾದರೆ, ಕೆಲವರು ಕಿಟಕಿಯ ಗ್ಲಾಸ್ ಒಡೆದು ಹೊರ ಬಂದಿದ್ದಾರೆ.
ಇದನ್ನೂ ಓದಿ : Recruitment 2025: ಶೀಘ್ರವೇ 4600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ..!
ರಕ್ಷಣಾ ಕಾರ್ಯ ಹಾಗೂ ತನಿಖೆ
ಘಟನೆಯ ನಂತರ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕರ್ನೂಲ್ ಜಿಲ್ಲಾ ಎಸ್ಪಿ ವಿಕ್ರಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿ ದುರಂತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.
ಪ್ರಾಥಮಿಕ ಅಂದಾಜು ಪ್ರಕಾರ ಎಂಜಿನ್ ಹೀಟಿಂಗ್ ಅಥವಾ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ನಡೆದ ಸ್ಥಳ
ಈ ದುರ್ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನಟೆಕೋರು ಗ್ರಾಮದ ಬಳಿ ನಡೆದಿದೆ.
ಹೈದರಾಬಾದ್–ಬೆಂಗಳೂರು ಹೆದ್ದಾರಿ (NH 44)ಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ.
MUST WATCH: TUMAKURU | AMBULANCE ಸಿಗದೆ ಯುವಕ ಸಾವು – ಒಂದೇ ಸುದ್ದಿಗೆ ಕೋಳಾಲಕ್ಕೆ ಬಂದೇ ಬಿಡ್ತು AMBULANCE




