SIRA : ರಾಜ್ಯದಲ್ಲಿ ಮಳೆಯ ಅಬ್ಬರ ಮತ್ತೆ ಹೆಚ್ಚಾಗುತ್ತಿದೆ. ಇತ್ತ ತುಮಕೂರು ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಹೆಚ್ಚಾಗಿದೆ.

ರಾಜ್ಯದಲ್ಲಿ ಮಳೆಯ ಅಬ್ಬರ ಮತ್ತೆ ಹೆಚ್ಚಾಗುತ್ತಿದೆ. ಇತ್ತ ತುಮಕೂರು ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಹೆಚ್ಚಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಇದೆ. ಇತ್ತ ಬೆಸ್ಕಾಂ ಇಲಾಖೆಯು ಕೂಡ ಮಳೆಗಾದಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಮುಂಜಾಗ್ರತೆವಹಿಸಬೇಕು. ಆದ್ರೆ ಅದ್ಯಾಕೋ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ. ಇತ್ತ ಶಿರಾ ನಗರದಲ್ಲಿ ಪುಟ್ಟ ಕಂದಮ್ಮ ಆಟವಾಡಲು ಮನೆಯ ಮುಂದೆ ಬಂದಿದೆ. ಆದ್ರೆ, ತಿಳಿಯದೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ.
ವಿದ್ಯುತ್ ತಗುಲಿ ಬಾಲಕಿ ಸಾವು
ಮನೆಯ ಹೊರಗಡೆ ಆಟವಾಡುತ್ತಿದ್ದ 4 ವರ್ಷದ ಬಾಲಕಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಶಿರಾ ನಗರದ ವಾರ್ಡ್ ನಂಬರ್ 24 ರ ಜಾಮೀಯಾ ನಗರದಲ್ಲಿ ನಡೆದಿದೆ. ಮಗುವಿನ ಸಾವಿಗೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು.
ಇದನ್ನು ಓದಿ : ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಾಮ್ ಚರಣ್ ದಂಪತಿ
ಮೃತ ಬಾಲಕಿ ಹನಿಯಾ ಪಾತೀಮಾ
ಇನ್ನು ಜಾಮೀಯಾ ನಗರದ ಮುಜಾಹಿದ್ ಎಂಬುವವರ 4 ವರ್ಷದ ಹನಿಯಾ ಪಾತೀಮಾ ಮೃತಪಟ್ಟಿರುವ ಪುಟ್ಟ ಬಾಲಕಿ. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಮೂರು ದಿನದಿಂದ ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಮತ್ತು ಮನೆಯಲ್ಲಿ ಕರೆಂಟ್ ಶಾಕ್ ಮತ್ತಿತರ ವಿಚಾರದಲ್ಲಿ ಸಾರ್ವಜನಿಕರು ಸುರಕ್ಷತಾ ವಿಭಾಗ ಮತ್ತು ಸಹಾಯವಾಣಿಗೆ ಕರೆ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ರು. ಆದ್ರೆ ಅಧಿಕಾರಿಗಳ ಧಿವ್ಯ ನಿರ್ಲಕ್ಷ್ಯಕ್ಕೆ ಇಂದು ಪುಟ್ಟ ಮಗು ಬಲಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ರು.

ವಿದ್ಯುತ್ ಸಮಸ್ಯೆ ನಿರ್ಲಕ್ಷ್ಯ: ಅಧಿಕಾರಿಗಳ ಕರ್ತವ್ಯಲೋಪದಿಂದ ಸಾವು
ಇನ್ನು ವಿದ್ಯುತ್ ಸಮಸ್ಯೆ ಕುರಿತಾಗಿ ಸಾರ್ವಜನಿಕರು ಎಷ್ಟೇ ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ರು ಕ್ಯಾರೆ ಎಂದಿಲ್ಲವಂತೆ. ಇತ್ತ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಇಂಜಿನಿಯರ್ ಕ್ರಮ ಕೈಗೊಂಡಿರಲಿಲ್ಲ. ಇವರ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ದಿಂದಾಗಿಯೇ ಈ ಸಾವು ಸಂಭವಿಸಿದೆ ಎಂದು ಕಿಡಿಕಾರಿದ್ರು.
ಸಂಬಂಧಪಟ್ಟ ಅಧಿಕಾರಿ ಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಇತ್ತ ಪುಟ್ಟ ಮಗುವನ್ನು ಹಾಡಿ ಬೆಳೆಸಿದ್ದ ಹೆತ್ತ ತಾಯಿ, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಹೆತ್ತ ಕರುಳು ತನ್ನ ಮಗುವಿನ ಸಾವಿಗೆ ನ್ಯಾಯ ಬೇಕೆಂದು ಗೋಗರಿಯಿತು. ಅತ್ತ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪುಟ್ಟ ಕಂದಮ್ಮನ ಸಾವಿಗೆ ಕಾರಣ, ಸಂಬಂಧಪಟ್ಟ ಅಧಿಕಾರಿ ಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಇದನ್ನು ನೋಡಿ : ಸಿಎಂ ಕುರ್ಚಿಯ ಮೇಲೆ DCM DKS ಕಣ್ಣು- ನವೆಂಬರ್ ಕ್ರಾಂತಿ ಮುನ್ಸೂಚನೆನಾ..?




