Odisha Reels Tragedy : ಒಡಿಶಾದ ಪುರಿಯಲ್ಲಿ ರೀಲ್ಸ್ ಚಿತ್ರೀಕರಿಸುತ್ತಿದ್ದ 15 ವರ್ಷದ ಬಾಲಕ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಜನಕ್ ದೇವ್ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ರೀಲ್ಸ್ ಮಾಡಲು ಹಳಿಯ ಮೇಲೆ ನಿಂತ ಬಾಲಕ
ಮಂಗಳವಾರ ನಡೆದ ಈ ಘಟನೆಗೆ ಮೃತ ಯುವಕ ವಿಶ್ವಜೀತ್ ಸಾಹು, ಮಂಗಳಘಾಟ್ ಪ್ರದೇಶದ ನಿವಾಸಿ. ತಾಯಿಯೊಂದಿಗೆ ದಕ್ಷಿಣಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ, ಮನೆಗೆ ಮರಳುವಾಗ ಸಾಮಾಜಿಕ ಮಾಧ್ಯಮಕ್ಕಾಗಿ ವಿಡಿಯೋ ಮಾಡಲು ರೈಲ್ವೆ ಹಳಿಯ ಮೇಲೆ ನಿಂತಿದ್ದಾನೆ.
ಆತನ ಮೊಬೈಲ್ನಲ್ಲಿ ರೈಲು ಬರುತ್ತಿರುವ ದೃಶ್ಯವನ್ನು ಸೆರೆಹಿಡಿಯುವ ಪ್ರಯತ್ನದ ವೇಳೆ, ರೈಲು ಢಿಕ್ಕಿಯಾಗಿ ವಿಶ್ವಜೀತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರೈಲು ಹಾದುಹೋಗುವ ಶಬ್ಧವೂ ಆತನ ಮೊಬೈಲ್ನಲ್ಲಿ ದಾಖಲಾಗಿರುವುದಾಗಿ ಮೂಲಗಳು ಹೇಳಿವೆ.
Odisha Reels Tragedy ಪೊಲೀಸರ ತನಿಖೆ ಪ್ರಾರಂಭ
ಘಟನೆ ನಂತರ ಒಡಿಶಾ ರೈಲ್ವೆ ಪೊಲೀಸರು (GRP) ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಗೆ ಸಂಬಂಧಿಸಿದ ವೀಡಿಯೊ ವೈರಲ್ ಆಗಿದೆ.
ಇದನ್ನೂ ಓದಿ : Recruitment 2025: ಶೀಘ್ರವೇ 4600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ..!
ಹಿಂದೆಯೂ ಸಂಭವಿಸಿದ ರೀಲ್ಸ್ ಹುಚ್ಚಾಟದ ಸಾವುಗಳು
ಇದು ಒಡಿಶಾದಲ್ಲಿ ರೀಲ್ಸ್ ಹುಚ್ಚಾಟಕ್ಕೆ ಬಲಿಯಾದ ಮೊದಲ ಘಟನೆ ಅಲ್ಲ.
ಆಗಸ್ಟ್ ತಿಂಗಳಲ್ಲಿ ಗಂಜಾಂ ಜಿಲ್ಲೆಯ 22 ವರ್ಷದ ಯೂಟ್ಯೂಬರ್ ಸಾಗರ್ ತುಡು, ಕೊರಾಪುಟ್ನ ದುಡುಮಾ ಜಲಪಾತದಲ್ಲಿ ರೀಲ್ಸ್ ಚಿತ್ರೀಕರಿಸುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಸಾಗರ್ ಹಾಗೂ ಅವನ ಸ್ನೇಹಿತ ಅಭಿಜಿತ್ ಬೆಹೆರಾ, ತಮ್ಮ ಯೂಟ್ಯೂಬ್ ಚಾನೆಲ್ಗಾಗಿ ಡ್ರೋನ್ ಕ್ಯಾಮೆರಾ ಬಳಸಿ ಸ್ಥಳೀಯ ಪ್ರವಾಸಿ ತಾಣಗಳ ವೀಡಿಯೊ ಚಿತ್ರೀಕರಿಸುತ್ತಿದ್ದರು.
ಆದರೆ ಮಚಕುಂಡ ಅಣೆಕಟ್ಟಿನಿಂದ ನೀರು ಬಿಡುಗಡೆಗೊಂಡ ನಂತರ, ಜಲಪಾತದ ನೀರಿನ ಹರಿವು ಹೆಚ್ಚಾಗಿ ಅಪಘಾತ ಸಂಭವಿಸಿತ್ತು.
ಸಾಮಾಜಿಕ ಮಾಧ್ಯಮ ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಯುವಕರು
ಈ ಘಟನೆಗಳು ಸಾಮಾಜಿಕ ಮಾಧ್ಯಮದ ಹುಚ್ಚಾಟದ ಅಪಾಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿವೆ.
ಯುವಕರು ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋಗಳಿಗಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಚಿತ್ರೀಕರಣ ಮಾಡುತ್ತಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
MUST WATCH: TUMAKURU | AMBULANCE ಸಿಗದೆ ಯುವಕ ಸಾವು – ಒಂದೇ ಸುದ್ದಿಗೆ ಕೋಳಾಲಕ್ಕೆ ಬಂದೇ ಬಿಡ್ತು AMBULANCE




