Cricket: ಹ್ಯಾಂಡ್ಶೇಕ್, ಏಷ್ಯಾ ಕಪ್ (Asia Cup) ವಿವಾದದ ಬೆನ್ನಲ್ಲೇ ಮತ್ತೆ ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ಕ್ರಿಕೆಟ್ ಪಂದ್ಯ ನಡೆಯಲಿದೆ.

CRICKET: ಏಷ್ಯಾ ಕಪ್ ವಿವಾದದ ಬೆನ್ನಲ್ಲೇ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲು ವೇದಿಕೆ ಸಿದ್ಧವಾಗಿದೆ. ನವೆಂಬರ್ 7ರಿಂದ 9ರವರೆಗೆ ಹಾಂಕಾಂಗ್ನಲ್ಲಿ ನಡೆಯಲಿರುವ ಹಾಂಕಾಂಗ್ ಕ್ರಿಕೆಟ್ ಸಿಕ್ಸಸ್ ಟೂರ್ನಿಯಲ್ಲಿ ಎರಡೂ ತಂಡಗಳು ಇದ್ದು, ಈ ರೋಚಕ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಆರು ಓವರ್ಗಳ ಫಾರ್ಮ್ಯಾಟ್ನ ಈ ಸ್ಪರ್ಧೆಯಲ್ಲಿ ಒಟ್ಟು 12 ದೇಶಗಳ ತಂಡಗಳು ಭಾಗವಹಿಸುತ್ತಿವೆ. ಭಾರತ, ಪಾಕಿಸ್ತಾನ, ಕುವೈತ್, ಶ್ರೀಲಂಕಾ, ಬಾಂಗ್ಲಾದೇಶ, ಹಾಂಕಾಂಗ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಆಫ್ರಿಕಾ, ಅಫ್ಘಾನಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳು ಭಾಗವಹಿಸಲು ಸಜ್ಜಾಗಿವೆ.
ಇದನ್ನೂ ಓದಿ : Neeraj Chopra : ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ
ಇನ್ನು ಭಾರತೀಯ ತಂಡವನ್ನು ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದು, ಮಾಜಿ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಕೂಡ ತಂಡದ ಭಾಗವಾಗಿದ್ದಾರೆ. ಹಾಂಕಾಂಗ್ ಕ್ರಿಕೆಟ್ ಸಿಕ್ಸಸ್ ಟೂರ್ನಿಯು ಕೇವಲ ಆರು ಓವರ್ಗಳ ಪಂದ್ಯಾವಳಿಯಾಗಿದ್ದು, ಹೆಚ್ಚು ಸ್ಫೋಟಕ ಬ್ಯಾಟಿಂಗ್ ಮತ್ತು ಅದ್ಭುತ ಕ್ಷಣಗಳನ್ನು ನೋಡಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
MUST WATCH : HASANAMBA TEMPLE | ಹಾಸನಾಂಬೆ ದರ್ಶನಕ್ಕೆ ಎಷ್ಟು ಲಕ್ಷ ಜನ ಸೇರಿದ್ರು ಗೊತ್ತಾ




