Chikkamagaluru : ದೇವಿರಮ್ಮನ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆ, ಪ್ರತಿ ವರ್ಷದಂತೆ ಮೈಸೂರು ಅರಸರ ಮನೆತನದಿಂದ ದೇವಿಗೆ ಬಾಗಿನ ಅರ್ಪಣೆ ಮಾಡಲಾಗಿದೆ.

Chikkamagaluru : ದೇವಿರಮ್ಮನ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆ, ಪ್ರತಿ ವರ್ಷದಂತೆ ಮೈಸೂರು ಅರಸರ ಮನೆತನದಿಂದ ದೇವಿಗೆ ಬಾಗಿನ ಅರ್ಪಣೆ ಮಾಡಲಾಗಿದೆ.ಐತಿಹಾಸಿಕ ದೇವಿರಮ್ಮ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ, ಪರಂಪರೆಯಂತೆ ಈ ವರ್ಷವೂ ಮೈಸೂರು ಅರಸರ ಮನೆತನದಿಂದ ದೇವಿಗೆ ಬಾಗಿನ ಅರ್ಪಣೆ ಮಾಡಲಾಗಿದೆ. ಅನಾದಿಕಾಲದಿಂದಲೇ ಜಾರಿಯಲ್ಲಿರುವ ಈ ಸಂಪ್ರದಾಯದಂತೆ, ಮೈಸೂರು ಸಂಸ್ಥಾನದ ಪರವಾಗಿ ಆಗಮಿಸಿದ ಅರಸು ಸಂಘದ ರಾಜ್ಯಾಧ್ಯಕ್ಷ ದಿನೇಶ್ ನೇತೃತ್ವದ ತಂಡವನ್ನು ದೇವಾಲಯದ ಆಡಳಿತ ಮಂಡಳಿ ಹಾರ್ದಿಕವಾಗಿ ಸ್ವಾಗತಿಸಿತು.
ದೇವಿಗೆ ಹಣ್ಣು, ಕಾಯಿ, ವಿಳ್ಯೆದೆಲೆ, ಸೀರೆ ಹಾಗೂ ಅರಿಶಿನ-ಕುಂಕುಮದಿಂದ ಬಾಗಿನ ಅರ್ಪಿಸಲಾಗಿದ್ದು, ಭಕ್ತರ ನಡುವೆ ಭಕ್ತಿ ಭಾವನೆ ಹರಡಿದಿದೆ. ರಾಕ್ಷಸನ ಸಂಹಾರ ಮಾಡಿದ ಚಾಮುಂಡೇಶ್ವರಿಯ ಶಾಂತರೂಪ ದೇವಿರಮ್ಮನೆಂದು ಭಕ್ತರಲ್ಲಿ ನಂಬಿಕೆ ಇದೆ. ಬಿಂಡಿಗ ಬೆಟ್ಟದಲ್ಲಿ ನೆಲೆಸಿರುವ ದೇವಿರಮ್ಮ, ವರ್ಷದಲ್ಲಿ ಒಂದೇ ಬಾರಿ ಭಕ್ತರಿಗೆ ದರ್ಶನ ನೀಡುತ್ತಾರೆ. ಉಳಿದ ದಿನಗಳಲ್ಲಿ ದೇವಿ ಬೆಟ್ಟದ ತಪ್ಪಲಿನ ಕೆಳಭಾಗದಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ ದರ್ಶನ ನೀಡುತ್ತಾರೆ.
ಇದನ್ನು ಓದಿ : ರಿಷಾ ಕೊಟ್ಟ ಎಚ್ಚರಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಜಾನ್ವಿ

ಇನ್ನು ಈ ಬಾರಿ ಎರಡು ದಿನ ಭಕ್ತರಿಗೆ ಬೆಟ್ಟ ಹತ್ತಲು ಅವಕಾಶ ನೀಡಲಾಗಿತ್ತು. ಈ ವೇಳೆ ಸುಮಾರು 70 ಸಾವಿರಕ್ಕೂ ಅಧಿಕ ಭಕ್ತರು ಬರೀಗಾಲಿನಲ್ಲಿ ಬೆಟ್ಟ ಹತ್ತಿ ತಾಯಿಯ ದರ್ಶನ ಪಡೆದಿದ್ದಾರೆ. ಇಂದು, ಎರಡು ದಿನಗಳ ಕಾಲ ಬೆಟ್ಟದ ಮೇಲಿದ್ದ ದೇವಿ, ವಿಧಿವಿಧಾನದಂತೆ ಕೆಳಗಿರುವ ಗರ್ಭಗುಡಿಗೆ ಪ್ರತ್ಯಾಗಮಿಸಿದ್ದಾರೆ.
ಜಾತ್ರಾ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ಕೂಡಿದ್ದು, ಭಕ್ತಾದಿಗಳಿಗೆ ಅಂದಾಜು ಸುರಕ್ಷತೆ ಹಾಗೂ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಿರಮ್ಮನ ಆಲಯದ ಈ ವೈಭವಮಯ ಜಾತ್ರೆ, ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ತುಂಬಿದೆ.

ಇದನ್ನು ನೋಡಿ : ದೇವಿರಮ್ಮನಿಗೆ ಮೈಸೂರು ಅರಸರ ಮನೆತನದಿಂದ ಬಾಗಿನ ಅರ್ಪಣೆ




