Sudeep : ಬಿಗ್ಬಾಸ್ ಮನೆಯಲ್ಲಿ ಮೊದಲ ಗ್ರ್ಯಾಂಡ್ ಫಿನಾಲೆ ಸಂಭ್ರಮ ಮನೆ ಮಾಡಿದೆ.

ಬಿಗ್ಬಾಸ್ ಕಾರ್ಯಕ್ರಮದಲ್ಲಿ ಶನಿವಾರ ಹಾಗೂ ಭಾನುವಾರದ ಎಪಿಸೋಡ್ಗಳು ಯಾವಾಗಲೂ ವಿಶೇಷವಾಗಿರುತ್ತವೆ. ಇದರ ಪ್ರಮುಖ ಆಕರ್ಷಣೆಯಾದ ಕಿಚ್ಚ ಸುದೀಪ್ ಅವರ ನಿರೂಪಣೆಯ ಶೈಲಿ, ಸ್ಪರ್ಧಿಗಳಿಗೆ ನೀಡುವ ಮಾರ್ಗದರ್ಶನ, ಮತ್ತು ಖಡಕ್ ಮಾತುಗಳು ಪ್ರೇಕ್ಷಕರನ್ನು ಇನ್ನಷ್ಟು ಸೆಳೆಯುತ್ತವೆ.
ಸುದೀಪ್ಗೆ ಬಿಗ್ಬಾಸ್ ಮನೆಯಿಂದ ವಿಶೇಷ ಸರ್ಪ್ರೈಸ್!
ಈ ವಾರದ ಶೋಯಲ್ಲಿ ಕಿಚ್ಚ ಸುದೀಪ್ಗೆ ಬಿಗ್ಬಾಸ್ ಮನೆಯಿಂದ ಒಂದು ವಿಶೇಷ ಸರ್ಪ್ರೈಸ್ ಸಿಕ್ಕಿದೆ. ಅವರ 24ನೇ ವಿವಾಹ ವಾರ್ಷಿಕೋತ್ಸವವನ್ನು ಕಾರ್ಯಕ್ರಮದ ವೇದಿಕೆಯಲ್ಲಿಯೇ ಸಂಭ್ರಮದೊಂದಿಗೆ ಆಚರಿಸಲಾಯಿತು. ಈ ಸಡಗರದ ವೇಳೆ, ಸುದೀಪ್ ತಮ್ಮ ತಾಯಿಯ ನೆನಪನ್ನು ಹಂಚಿಕೊಂಡರು. “ಇವತ್ತಿನ ದಿನವೇ ನನ್ನ ತಾಯಿಯೊಂದಿಗೆ ಕೊನೆಯದಾಗಿ ಮಾತನಾಡಿದ್ದು,” ಎಂದು ಸುದೀಪ್ ಭಾವನಾತ್ಮಕವಾಗಿ ಹೇಳಿದರು.
ಇದನ್ನು ಓದಿ : ಹಾಸನಾಂಬೆಯ ದರ್ಶನ ಪಡೆದ ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ

ಕಾಕ್ರೋಚ್ ಸುಧಿ ಮೊದಲ ಗ್ರ್ಯಾಂಡ್ ಫಿನಾಲೆ ವಿನ್ನರ್!
ಬಿಗ್ಬಾಸ್ ಮನೆಯಲ್ಲಿ ಮೊದಲ ಗ್ರ್ಯಾಂಡ್ ಫಿನಾಲೆ ಸಂಭ್ರಮವಾಗಿದೆ. ಈ ಸ್ಪರ್ಧೆಯ ವಿಜೇತವಾಗಿ ಕಾಕ್ರೋಚ್ ಸುಧಿ ಹೊರಹೊಮ್ಮಿದ್ದಾರೆ.
ಅವರ ಆಟದ ತೀವ್ರತೆ ಹಾಗೂ ನಿಖರತೆಯಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇನ್ನು ಈ ವಾರದ ಬಿಗ್ ಎಲಿಮಿನೇಷನ್ನಲ್ಲಿ ಸತೀಶ್, ಅಶ್ವಿನಿ ಎಸ್.ಎನ್ ಮತ್ತು ಮಂಜುಭಾಷಿಣಿ ಬಿಗ್ಬಾಸ್ ಮನೆ ಬಿಟ್ಟಿದ್ದಾರೆ. ಒಂದೇ ವಾರದಲ್ಲಿ ಮೂವರು ಸ್ಪರ್ಧಿಗಳ ಎಲಿಮಿನೇಷನ್ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.
ಹೊಸ ಎಂಟ್ರಿಗಳಿಗೆ ಬಾಗಿಲು ತೆರೆದ ಬಿಗ್ಬಾಸ್ ಮನೆ
ಎಲಿಮಿನೇಷನ್ ಬಳಿಕ ಬಿಗ್ಬಾಸ್ ಮನೆಯಲ್ಲಿ ಹೊಸ ಸ್ಪರ್ಧಿಗಳ ಎಂಟ್ರಿಗೆ ತಯಾರಿ ನಡೆದಿದ್ದು, ಮುಂದಿನ ಆಟ ಇನ್ನಷ್ಟು ರೋಚಕವಾಗಲಿದೆ ಎಂಬ ನಿರೀಕ್ಷೆಯಿದೆ.

ಇದನ್ನು ನೋಡಿ : ದೀಪಾವಳಿ ಹಬ್ಬಕ್ಕೆ KSRTC ಗುಡ್ ನ್ಯೂಸ್ ಹಬ್ಬಕ್ಕೆ ಊರಿಗೆ ಹೋಗಲು ಹೆಚ್ಚುವರಿ ಬಸ್




