ICC New Rules : ಐಸಿಸಿ ಹೊಸ ನಿಯಮಗಳನ್ನು ಅಭಿವೃದ್ಧಿಪಡಿಸುವುದನ್ನು ಮತ್ತೇ ಮುಂದುವರೆಸಿದೆ. ಇದೀಗ ಮತ್ತೊಂದು ಹೊಸ ನಿಯಮವನ್ನು ಪರಿಚಯಿಸಲಾಗಿದೆ. ಈ ನಿಯಮದಿಂದಾಗಿ ಬ್ಯಾಟ್ಸ್ಮನ್ ಇನ್ಮುಂದೆ ವಿಕೆಟ್ ಹಿಂದೆ ಹೋಗಿ ಶಾಟ್ ಬಾರಿಸುವಂತಿಲ್ಲ. ಒಂದು ವೇಳೆ ಶಾಟ್ ಬಾರಿಸಿದರೂ ಅದಕ್ಕೆ ರನ್ ನೀಡಲಾಗುವುದಿಲ್ಲ ಎನ್ನಲಾಗ್ತಿದೆ.

ICC New Rules : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕ್ರಿಕೆಟ್ ಆಟವನ್ನು ಇನ್ನಷ್ಟು ನ್ಯಾಯಸಮ್ಮತ ಮತ್ತು ರೋಮಾಂಚನಗೊಳಿಸಲು ಹೊಸ ನಿಯಮಗಳನ್ನು ಜಾರಿತಂದಿದೆ. ಇದೀಗ ಐಸಿಸಿ ಪರಿಚಯಿಸಿರುವ ಹೊಸ ನಿಯಮ ಕ್ರಿಕೆಟ್ ಆಟದ ನಡೆಗೆ ಮಹತ್ವಪೂರ್ಣ ಬದಲಾವಣೆ ತಂದಿದೆ.
ಈ ನಿಯಮದ ಪ್ರಕಾರ, ಬ್ಯಾಟ್ಸ್ಮನ್ ಆಡುವ ವೇಳೆ ಪೂರ್ಣವಾಗಿ ಸ್ಟಂಪ್ಗಳ ಹಿಂದೆ ಹೋಗಿ ಶಾಟ್ ಬಾರಿಸಿದರೆ, ಅದಕ್ಕೆ ಯಾವುದೇ ರನ್ಗಳನ್ನು ನೀಡಲಾಗುವುದಿಲ್ಲ. ಇದನ್ನು “ಡೆಡ್ ರನ್ (Dead Run)” ಎಂದು ಪರಿಗಣಿಸಲಾಗುತ್ತದೆ. ಬ್ಯಾಟರ್ ಸ್ಟಂಪ್ಗಳ ಹಿಂದೆ ಹೋಗಿದರೂ, ಅವನ ದೇಹದ ಯಾವುದೇ ಭಾಗ (ಕೈ, ಕಾಲು) ಪಿಚ್ನ ಮೇಲ್ಮೈಯ ಮೇಲೆ ಇದ್ದರೆ ಮಾತ್ರ ಆ ರನ್ ಕಾನೂನುಬದ್ಧ.
ಇನ್ನು ಬ್ಯಾಟರ್ ಸಂಪೂರ್ಣವಾಗಿ ಸ್ಟಂಪ್ಗಳ ಹಿಂದೆ ಹೋಗಿ, ಪಿಚ್ನ ಮೇಲ್ಮೈಯನ್ನೂ ಸ್ಪರ್ಶಿಸದೆ ಶಾಟ್ ಬಾರಿಸಿದರೆ, ಅದಕ್ಕೆ ರನ್ ಸಿಗದು. ಇದನ್ನು ಕಾನೂನುಬಾಹಿರ ಶಾಟ್ ಎಂದು ಪರಿಗಣಿಸಲಾಗುತ್ತದೆ. ಈ ನಿಯಮಗಳು ಟೆಸ್ಟ್, ಏಕದಿನ ಸೇರಿದಂತೆ ಟಿ20 ಫಾರ್ಮಾಟ್ ಗಳಿಗೆ ಅನ್ವಯವಾಗುತ್ತದೆ.




