Muniratna vs Kusuma : ಶಾಸಕ ಮುನಿರತ್ನ ವಿತರಣೆ ಮಾಡ್ತಿದ್ದ ಪಟಾಕಿಗಳನ್ನ ಹಂಚದಂತೆ ತಡೆದ ಪೊಲೀಸರು, ಕಾಂಗ್ರೆಸ್ ನಾಯಕಿ ಕುಸುಮಾ ಸೂಚನೆ ಮೆರೆಗೆ ಪಟಾಕಿ ಹಂಚದಂತೆ ತಡೆದಿದ್ದಾರೆ ಎಂದು ಶಾಸಕ ಮುನಿರತ್ನ ಕಿಡಿಕಾರಿದ್ದಾರೆ.

Muniratna vs Kusuma : ದೀಪಾವಳಿ ಹಬ್ಬದ ಸಂಭ್ರಮದ ಹೊತ್ತಿನಲ್ಲಿ ಶಾಸಕ ಮುನಿರತ್ನ ಹಾಗೂ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತ ರಾಯಪ್ಪ ನಡುವಿನ ಮುಸುಕಿನ ಗುದ್ದಾಟ ಮತ್ತೆ ಶುರುವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬಕ್ಕೆಂದು ಕ್ಷೇತ್ರದ ಜನತೆಗೆ ಉಚಿತವಾಗಿ ಪಟಾಕಿ ವಿತರಣೆ ಮಾಡುತ್ತಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರಾದ ಮುನಿರತ್ನ, ಈ ವರ್ಷವೂ ಅದೇ ಹಾದಿ ಹಿಡಿದಿದ್ದರು. ಆದರೆ ಈ ಬಾರಿ ಅವರ ಯೋಜನೆಗೆ ಬ್ರೇಕ್ ಬಿದ್ದಿದ್ದು, ರಾಜಕೀಯಕ್ಕಾಗಿ ಈ ರೀತಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದನ್ನೂ ಓದಿ : Deepavali Special : ದೀಪಾವಳಿಗೆ K.G.F ಮತ್ತು ಕಾಂತಾರ ಪಟಾಕಿಗಳ ಹೊನಲು
ಇನ್ನು ಲಕ್ಷ್ಮಿ ದೇವಿ ನಗರದ ವಾರ್ಡ್ನಲ್ಲಿ ಇರುವ ಶಾಸಕರ ಕಚೇರಿಗೆ ಬೀಗ ಹಾಕಿ, ಮುನಿರತ್ನ ತಂದಿದ್ದ ಪಟಾಕಿಗಳನ್ನು ಸಾರ್ವಜನಿಕರಿಗೆ ಹಂಚದಂತೆ ಪೊಲೀಸರು ತಡೆದಿದ್ದಾರೆ. ಈ ಕ್ರಮದ ಹಿಂದೆ ಕಾಂಗ್ರೆಸ್ ನಾಯಕಿ ಕುಸುಮಾ ಅವರ ಕೈವಾಡವಿದೆ ಎಂದು ಶಾಸಕ ಮುನಿರತ್ನ ನೇರವಾಗಿ ಆರೋಪಿಸಿದ್ದಾರೆ.
ಈ ಸ್ಥಳದಲ್ಲಿ ಎಸಿಪಿ, ಇಬ್ಬರು ಪಿಐ, ನಾಲ್ವರು ಎಸ್ಐ ಹಾಗೂ ಹಲವಾರು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತ, ಈಗಾಗಲೇ ಪಟಾಕಿ ಕೂಪನ್ ಪಡೆದಿದ್ದ ಸಾರ್ವಜನಿಕರು ಕಚೇರಿ ಬಳಿಗೆ ಬಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಕುಸುಮಾ ಸೂಚನೆ ಮೇರೆಗೆ ಪಟಾಕಿ ವಿತರಣೆ ತಡೆದಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪ ಮಾಡ್ತಿದ್ದಾರೆ.
MUST WATCH : PARAMESHWAR | ಸರ್ಕಾರಿ ಜಾಗದಲ್ಲಿ RSS ಕಾರ್ಯಕ್ರಮ ಮಾಡುವಂತಿಲ್ಲ




