Bangalore News : ಬೆಂಗಳೂರು ರಿಚರ್ಡ್ಸ್ ಟೌನ್ನಲ್ಲಿ 17 ವರ್ಷದ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಹಾರಿ ಸಾವನ್ನಪ್ಪಿದ ಘಟನೆ ನಡೆದಿದೆ. ಆತ್ಮಹತ್ಯೆಯ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿ ತನಿಖೆ ಮುಂದುವರಿಸಿದ್ದಾರೆ.

Bangalore :ಶಾಲಾ ಕಟ್ಟಡದಿಂದ ಹಾರಿ 17 ವರ್ಷದ ಬಾಲಕ ಸಾವು
ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಆತ್ಮಹತ್ಯೆಯ ದುರ್ಘಟನೆ ನಡೆದಿದೆ. ರಿಚರ್ಡ್ಸ್ ಟೌನ್ನಲ್ಲಿ 17 ವರ್ಷದ ಬಾಲಕನೊಬ್ಬ ಶಾಲಾಕಟ್ಟಡದಿಂದ ಹಾರಿ ಸಾವನ್ನಪ್ಪಿದ ಘಟನೆ ಅಕ್ಟೋಬರ್ 13ರಂದು ಬೆಳಿಗ್ಗೆ ನಡೆದಿದೆ.ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದು, ವಿದ್ಯಾರ್ಥಿ ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಪೂರ್ವ ಬೆಂಗಳೂರಿನ ರಿಚರ್ಡ್ಸ್ ಟೌನ್ನ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ಸಂಭವಿಸಿದೆ. ಬೆಳಿಗ್ಗೆ 8.20ರ ಸುಮಾರಿಗೆ 12ನೇ ತರಗತಿಯ ವಿಜ್ಞಾನ ವಿದ್ಯಾರ್ಥಿಯೊಬ್ಬನು ಶಾಲೆಯ ಎರಡನೇ ಮಹಡಿಯಿಂದ ಹಾರಿರುವುದು ದಾಖಲಾಗಿದೆ.ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ, ಚಿಕಿತ್ಸೆ ಫಲಕಾರಿಯಾಗದೆ ದುರ್ಮರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Bengaluru tragedy: ಪೊಲೀಸ್ ತನಿಖೆ ಮುಂದುವರಿಕೆ
ಪೊಲೀಸರು ಪ್ರಾಥಮಿಕವಾಗಿ ಪ್ರಕರಣವನ್ನು ಅಹಜ ಸಾವು (UDR) ಎಂದು ದಾಖಲಿಸಿದ್ದಾರೆ.ಶಾಲೆಯ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಹಪಾಠಿಗಳ ಹೇಳಿಕೆಗಳ ಆಧಾರದ ಮೇಲೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಪೊಲೀಸರು ಹೇಳುವಂತೆ,“ವಿದ್ಯಾರ್ಥಿ ಆತ್ಮಹತ್ಯೆಗೆ ಏಕೆ ದಾರಿ ಹಿಡಿದ ಎಂಬುದು ಇನ್ನೂ ತಿಳಿದಿಲ್ಲ. ತನಿಖೆಯಿಂದ ನಿಜವಾದ ಕಾರಣ ಬೆಳಕಿಗೆ ಬರಲಿದೆ.”

MUST READ : Karnataka: ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ
ಪ್ರತಿಭಾವಂತ ವಿದ್ಯಾರ್ಥಿ – ಶಾಲೆಯ ಪ್ರತಿಕ್ರಿಯೆ
ಶಾಲಾ ಆಡಳಿತ ಮಂಡಳಿ ಬಿಡುಗಡೆ ಮಾಡಿದ ಪತ್ರದಲ್ಲಿ,“ಮಕ್ಕಳ ಬೆಳಗಿನ ಅಸೆಂಬ್ಲಿ ವೇಳೆಯಲ್ಲಿ ವಿದ್ಯಾರ್ಥಿ ಕಟ್ಟಡದಿಂದ ಹಾರಿದ್ದಾನೆ. ನಾವು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ,” ಎಂದು ತಿಳಿಸಲಾಗಿದೆ.ಶಾಲೆಯ ಶಿಕ್ಷಕರು ಹೇಳುವಂತೆ,“ಅವನು ತುಂಬಾ ಚುಟುವಟಿಕೆಯ, ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ಪ್ರತಿಭಾನ್ವಿತ ವಿದ್ಯಾರ್ಥಿ. ಆತ್ಮಹತ್ಯೆಗೆ ಈತನಿಂದ ನಿರೀಕ್ಷಿಸಿರಲಿಲ್ಲ,” ಎಂದು ಹೇಳಿದ್ದಾರೆ.
ಮನೆವರಿಗೂ, ಶಾಲೆಗೂ ಆಘಾತ
ವಿದ್ಯಾರ್ಥಿಯ ಸಾವಿನ ಸುದ್ದಿ ಕೇಳಿ ಮನೆವರಿಗೂ ಅಘಾತವಾಗಿದೆ. ಶಾಲೆಯು ಮಂಗಳವಾರದಂದು ರಜೆ ಘೋಷಣೆ ಮಾಡಿದೆ.ಇದೀಗ ವಿದ್ಯಾರ್ಥಿಯ ಸಾವಿಗೆ ನಿಜವಾದ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Bengaluru tragedy : ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವ ಆತಂಕ
ಬೆಂಗಳೂರು ನಗರದಲ್ಲಿ ಮಕ್ಕಳ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಸಣ್ಣ ಪುಟ್ಟ ವಿಚಾರಗಳಿಗೂ ಆತ್ಮಹತ್ಯೆ ಮಾಡುವ ಪ್ರವೃತ್ತಿ ತೀವ್ರಗೊಳ್ಳುತ್ತಿದೆ ಎಂಬುದು ಸಮಾಜಕ್ಕೆ ಚಿಂತಾಜನಕ ಎಚ್ಚರಿಕೆಯ ಸಂಕೇತವಾಗಿದೆ.
ರಿಚರ್ಡ್ಸ್ ಟೌನ್ನಲ್ಲಿ ನಡೆದ ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಯ ಹಿಂದಿನ ನಿಜವಾದ ಕಾರಣ ಬೇಗನೆ ಬೆಳಕಿಗೆ ಬರಲಿದೆ ಎಂದು ತಿಳಿಸಿದ್ದಾರೆ.ಈ ದುರಂತವು ಶಾಲಾ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಇದನ್ನು ಓದಿ : ಕರೂರು ಕಾಲ್ತುಳಿತ ಘಟನೆ – ತನಿಖೆ ಮಾಡ್ತಿರೋ ವ್ಯಕ್ತಿ ಯಾರು ಗೊತ್ತಾ?
MUST WATCH : ಗಬ್ಬೆದ್ದು ನಾರುತ್ತಿದೆ ಕೃಷಿ ಉತ್ಪನ್ನ ಮಾರುಕಟ್ಟೆ – ರೈತರ, ಜನರ ಗೋಳು ಕೇಳೋರ್ಯಾರು | GUBBI MARKET |




