DEVIL MOVIE : ‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ಗೆ ಜೋಡಿಯಾಗಿ ನಟಿಸಿರುವ ರಚನಾ ರೈ, ಇದೀಗ ನಟಿ ರಚನಾ ರೈ ತಮ್ಮ ಸಹ ನಟ ದರ್ಶನ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

DEVIL MOVIE : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಚಿತ್ರೀಕರಣ ಈಗಾಗಲೇ ಪೂರ್ಣಗೊಳಿಸಿದ್ದು, ಈ ಸಿನಿಮಾದ ಎರಡು ಸಾಂಗ್ ಗಳನ್ನ ಬಿಡುಗಡೆ ಸಹ ಮಾಡಲಾಗಿದೆ. ಇನ್ನು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸಹ ಭರದಿಂದ ಸಾಗಿದ್ದು, ಇದೀಗ ಡೆವಿಲ್ ಸಿನಿಮಾ ನಟಿ ರಚನಾ ರೈ ಸಹ ನಟ ದರ್ಶನ್ ಬಗ್ಗೆ Social Media ದಲ್ಲಿ POST ಒಂದನ್ನು ಹಂಚಿಕೊಂಡಿದ್ದಾರೆ.
READ THIS : Kiccha Sudeep : ಕನ್ನಡಿಗರ ಪರ SIIMAಗೆ Tweet ಮೂಲಕ ಬಿಸಿ ಮುಟ್ಟಿಸಿದ ಸುದೀಪ್..!
ಡೆವಿಲ್ ಸಿನಿಮಾನಲ್ಲಿ ದರ್ಶನ್ ಎದುರು ನಾಯಕಿಯಾಗಿ ಮಂಗಳೂರಿನ ಚೆಲುವೆ ರಚನಾ ರೈ ನಟಿಸಿದ್ದಾರೆ. ಇದೀಗ ನಟಿ ರಚನಾ ರೈ ತಮ್ಮ ಸಹ ನಟ ದರ್ಶನ್ ಅವರ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ರಚನಾ ತಮ್ಮ ಎಕ್ಸ್ ಖಾತೆಯಲ್ಲಿ “ನಿಮ್ಮಂಥಹಾ ಸ್ಟಾರ್ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ. ಸೆಟ್ನಲ್ಲಿ ನಿಮ್ಮ ಏಕಾಗ್ರತೆ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆ, ಪಾತ್ರಗಳಿಗೆ ಜೀವ ತುಂಬುವ ನಿಮ್ಮ ಆ ಪ್ರಕ್ರಿಯೆಗಳನ್ನು ಪ್ರತಿದಿನವೂ ಸೆಟ್ನಲ್ಲಿ ನೋಡುವುದು ನನಗೆ ಒಂದು ಅದ್ಭುತ ಪಾಠವಾಯ್ತು’ ಎಂದಿದ್ದಾರೆ ರಚನಾ. ಅಲ್ದೇ ಒಬ್ಬ ಅದ್ಭುತ ಸಹನಟ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ವ್ಯಕ್ತಿಯಾಗಿ ಜೊತೆಗಿದ್ದಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದಿದ್ದಾರೆ ರಚನಾ ರೈ.

ಕ್ಯಾಮೆರಾ ಮುಂದೆ ಮಾತ್ರವಲ್ಲದೆ ಕ್ಯಾಮೆರಾ ಹಿಂದೆ ನಿಮ್ಮ ಪ್ರೀತಿ, ಆಪ್ತತೆ, ದಯೆ ನಿಮ್ಮ ವ್ಯಕ್ತಿತ್ವದ ದೊಡ್ಡ ಛಾಪು ಇತರರಲ್ಲಿ ಮೂಡಿಸುತ್ತದೆ. ನಾನು ಭೇಟಿ ಆಗಿರುವ ಅದ್ಭುತ ವ್ಯಕ್ತಿಗಳಲ್ಲಿ ನೀವೂ ಒಬ್ಬರು ಎಂದಿದ್ದಾರೆ.
MUST WATCH : ಗಬ್ಬೆದ್ದು ನಾರುತ್ತಿದೆ ಕೃಷಿ ಉತ್ಪನ್ನ ಮಾರುಕಟ್ಟೆ – ರೈತರ, ಜನರ ಗೋಳು ಕೇಳೋರ್ಯಾರು | GUBBI MARKET |




