BENGALORE ACCIDENT: ಬೆಂಗಳೂರು ಹೊರವಲಯದ ಮೇಡಹಳ್ಳಿ ಬಳಿ ಕ್ರೇನ್ ರಿಪೇರಿ ಮಾಡ್ತಿದ್ದಾಗ, ತುಂಡಾಗಿ ಬಿದ್ದು ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದರೆ, ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.

BENGALORE ACCIDENT: ಬೆಂಗಳೂರು ಹೊರವಲಯದ ಮೇಡಹಳ್ಳಿ ಬಳಿ ಕ್ರೇನ್ ಬಿದ್ದು ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದರೆ, ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. AS Crane Service ಎಂಬ ಖಾಸಗಿ ಸಂಸ್ಥೆಯು ಜನವಸತಿ ಪ್ರದೇಶದ ಮಧ್ಯೆ ಕ್ರೇನ್ ರಿಪೇರಿ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕ್ರೇನ್ ರಿಪೇರಿ ಕಾರ್ಯದ ವೇಳೆ ಕ್ರೇನ್ ತುಂಡಾಗಿ ಬಿದ್ದು ಐವರು ಕಾರ್ಮಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಲೂಲೂ (30), ಕರ್ಬನ್ (19), ಇಲ್ಲಾಜ್ (38), ಸಮೀರ್ (28), ಶಾಮದೇವ್ (52) ಎಂಬುವವರನ್ನು ಭಟ್ಟರಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಶಾಮದೇವ್ ಅವರ ಸ್ಥಿತಿ ಗಂಭೀರವಾಗಿದೆ.
READ THIS: ರಿಪೇರಿ ಮಾಡುತ್ತಿದ್ದಾಗ ಕ್ರೇನ್ ತುಂಡಾಗಿ ಬಿದ್ದು ಐವರಿಗೆ ಗಾಯ – ಓರ್ವ ಗಂಭೀರ
ಜನವಸತಿ ಪ್ರದೇಶದಲ್ಲಿ ಅಪಾಯಕಾರಿ Crane Service ನಡೆಸ್ತಿರೋದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಎಷ್ಟೋ ಬಾರಿ ಪೊಲೀಸರು ಮತ್ತು BBMP ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.




