Sports News :ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲಿ ಕುಲ್ದೀಪ್ ಯಾದವ್ ಐದು ವಿಕೆಟ್ ಕಿತ್ತರು. ಟೀಂ ಇಂಡಿಯಾ ವೆಸ್ಟ್ ವಿಂಡೀಸ್ಗೆ ಫಾಲೋ ಆನ್ ಹೇರಿದ್ದು, ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದೆ.

Sports News : ದೆಹಲಿಯಲ್ಲಿ ಟೀಂ ಇಂಡಿಯಾ ಪ್ರಭಾವ — ಎರಡನೇ ಟೆಸ್ಟ್ನಲ್ಲಿ ಫಾಲೋ ಆನ್!
Kuldeep Yadav – ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಪ್ರಭಾವ ಬೀರಿದೆ. ಎದುರಾಳಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ ಫಾಲೋ ಆನ್ (Follow-on) ಹೇರಿದೆ.
ಮೊದಲ ಇನಿಂಗ್ಸ್ನಲ್ಲಿ ಭಾರತ 518 ರನ್, ಕುಲ್ದೀಪ್ನ ಮ್ಯಾಜಿಕ್ ಬೌಲಿಂಗ್
ಮೊದಲ ದಿನ ಟಾಸ್ ಗೆದ್ದು ಬ್ಯಾಟ್ ಮಾಡಿದ ಭಾರತ, ಒಟ್ಟು 518 ರನ್ಗಳು ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಪ್ರತಿಯಾಗಿ ಬ್ಯಾಟಿಂಗ್ಗೆ ಇಳಿದ ವಿಂಡೀಸ್ ತಂಡ ನಿನ್ನೆಯ ದಿನಾಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಕೇವಲ 140 ರನ್ ಗಳಿಸಿತ್ತು.
ಇಂದು ಬೆಳಗ್ಗೆ ವಿಂಡೀಸ್ ತಂಡ ಸಂಪೂರ್ಣವಾಗಿ ಕುಸಿತ ಕಂಡು 248 ರನ್ಗಳಿಗೆ ಆಲೌಟ್ ಆಯಿತು.
ಟೀಂ ಇಂಡಿಯಾದ ಪರ Kuldeep Yadav ಐದು ವಿಕೆಟ್ ಕಿತ್ತರು.ಉಪನಾಯಕ ರವೀಂದ್ರ ಜಡೇಜಾ ಮೂರು ವಿಕೆಟ್, ಸಿರಾಜ್ ಮತ್ತು ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.

MUST READ : Virat Kohli : RCB ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್
Kuldeep Yadavನ ಐತಿಹಾಸಿಕ ಸಾಧನೆ
Kuldeep Yadav – ಕುಲ್ದೀಪ್ ಯಾದವ್ ಇದೀಗ 15 ಟೆಸ್ಟ್ ಪಂದ್ಯಗಳಲ್ಲಿ ಐದು ಬಾರಿ ಐದು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಇದು ಅವರ ಬೌಲಿಂಗ್ ಜೀವನದ ಮತ್ತೊಂದು ಪ್ರಮುಖ ಮೈಲುಗಲ್ಲಾಗಿದೆ.
MUST WATCH : ಕ್ರೀಡಾಲೋಕದ ಕಂಪ್ಲೀಟ್ ರೌಂಡಪ್-ಈ ಕ್ಷಣದ ಅಪ್ ಡೇಟ್ಸ್ | SPORTS NEWS |
ವಿಂಡೀಸ್ ಸಂಕಷ್ಟದಲ್ಲಿ — ಭಾರತ ಗೆಲುವಿನತ್ತ ಮುನ್ನುಗ್ಗುತ್ತಿದೆ
ಪ್ರಸ್ತುತ 270 ರನ್ಗಳ ಹಿನ್ನಡೆ ಅನುಭವಿಸಿರುವ ವೆಸ್ಟ್ ಇಂಡೀಸ್, ಮತ್ತೆ ಬ್ಯಾಟಿಂಗ್ಗೆ ಇಳಿದಿದೆ.
ಮಧ್ಯಾಹ್ನದ ವೇಳೆಯೂ ಟೀಂ ಇಂಡಿಯಾ ಬೌಲರ್ಗಳು ಇದೇ ಪ್ರಾಬಲ್ಯ ಮುಂದುವರಿಸಿದರೆ, ಇವತ್ತೇ ಭಾರತ ಗೆಲುವು ಖಚಿತ ಎನ್ನಬಹುದು.
ಇದರಿಂದ ಗಿಲ್ ಪಡೆ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಸಾಧ್ಯತೆ ಹೆಚ್ಚು.




