DK Shivakumar : ಬೆಂಗಳೂರು ನಡಿಗೆ ಪಾರ್ಕ್ಗಳಲ್ಲಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ ಇಂದು ಮತ್ತಿಕೆರೆ ಬಳಿಯ ಜೆಪಿ ಪಾರ್ಕ್ನಲ್ಲಿ ಪಾಕಿಂಗ್ ಮಾಡಿದರು.

ಬೆಂಗಳೂರು ನಡಿಗೆ ಪಾರ್ಕ್ಗಳಲ್ಲಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ ಇಂದು ಮತ್ತಿಕೆರೆ ಬಳಿಯ ಜೆಪಿ ಪಾರ್ಕ್ನಲ್ಲಿ ಪಾಕಿಂಗ್ ಮಾಡಿದರು. ಈ ವೇಳೆ ಜೆಪಿ ಪಾರ್ಕ್ನಲ್ಲಿ ಹೈಡ್ರಾಮಾ ನಡೆದಿದೆ.
RSS ಗಣವೇಷಧಾರಿ ಶಾಸಕ ಮುನಿರತ್ನರಿಗೆ ಡಿಕೆಶಿಯಿಂದ ನಿರ್ಲಕ್ಷ್ಯ
ಆರ್ಎಸ್ಎಸ್ ಡ್ರೆಸ್, ಟೋಪಿ ಧರಿಸಿ ಜೆಪಿ ಪಾರ್ಕ್ಗೆ ಬಂದ ಬಿಜೆಪಿ ಶಾಸಕ ಮುನಿರತ್ನ (muniratna) ಅವರನ್ನು ಡಿಕೆ ಶಿವಕುಮಾರ್ ನಿರ್ಲಕ್ಷ್ಯಿಸಿದರು. ಡಿಕೆಶಿ ವೇದಿಕೆಯಲ್ಲಿ ಕುಳಿತಾಗಲೂ ಶಾಸಕ ಮುನಿರತ್ನ ಕೆಳಗೆ ಜನರ ಮಧ್ಯೆ ಕುರ್ಚಿಯಲ್ಲಿ ಕುಳಿತರು. ಆಗ ಡಿಸಿಎಂ ‘ಹೇಯ್, ಕಪ್ಪು ಟೋಪಿ ಎಂಎಲ್ಎ ಬಾರಯ್ಯ’ ಎಂದು ಕರೆದರು. ಆದರೆ, ಅದಕ್ಕೆ ಒಪ್ಪದ ಮುನಿರತ್ನ ‘ನಾನು ಜನರ ಮಧ್ಯದಲ್ಲೇ ಕೂರುತ್ತೇನೆ’ ಎಂದು ಹೇಳಿದರು. ಇದಾದ ನಂತರ ಇದ್ದಕ್ಕಿದ್ದಂತೆ ಎದ್ದು ನಿಂತು ಡಿಕೆ ಶಿವಕುಮಾರ್ ಅವರ ವಿರುದ್ಧ ಮುನಿರತ್ನ ಪ್ರತಿಭಟನೆ ನಡೆಸಿದರು.
ಮೈಕ್ ಕಿತ್ತುಕೊಳ್ಳಲು ಯತ್ನಿಸಿದ ಮುನಿರತ್ನ
ಕಾರ್ಯಕ್ರಮದ ವೇಳೆ ವೇದಿಕೆಗೆ ಬಂದ ಮುನಿರತ್ನ, ಡಿಕೆ ಶಿವಕುಮಾರ್ ಕೈಯಲ್ಲಿ ಇದ್ದ ಮೈಕ್ ಕೇಳಿದರು. ಆದರೆ ಡಿಕೆಶಿ ನಿರಾಕರಿಸಿದರು. ಇದರಿಂದ ಮುನಿರತ್ನ ಕೋಪಗೊಂಡು ಮೈಕ್ ಕಿತ್ತುಕೊಳ್ಳಲು ಪ್ರಯತ್ನಿಸಿದರು, ಇದರೊಂದಿಗೆ ವೇದಿಕೆಯಲ್ಲಿ ಗಲಾಟೆ ಆರಂಭವಾಯಿತು.
ಮುನಿರತ್ನ ಆಕ್ರೋಶ: ‘ನನಗೆ ಆಹ್ವಾನವಿಲ್ಲ, ನನ್ನ ಫೋಟೋ ಹಾಕಿಲ್ಲ’
ಬೆಂಗಳೂರು ನಡಿಗೆ ಸರ್ಕಾರದ ಕಾರ್ಯಕ್ರಮವಾದರೂ ಶಾಸಕನಾದ ನನಗೆ ಆಹ್ವಾನ ನೀಡದೆ ಅಗೌರವ ತೋರಿದ್ದಾರೆ. ಈ ಕಾರ್ಯಕ್ರಮದಲ್ಲೆಲ್ಲೂ ಶಾಸಕನ ಒಂದು ಫೋಟೋ ಕೂಡ ಹಾಕಿಲ್ಲ, ನನಗೆ ಆಹ್ವಾನ ನೀಡಿಲ್ಲ’ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

‘ಇವರದು ರಾಜಕೀಯ ಡ್ರಾಮಾ’
ಡಿಕೆಶಿ, ಮುನಿರತ್ನ ಅವರ ನಡೆಗೆ ಪ್ರತಿಕ್ರಿಯಿಸಿ, “ಇವರದ್ದು ರಾಜಕೀಯ ಡ್ರಾಮಾ“, “ಇವನನ್ನ ಹೊರಗೆ ಕಳಿಸ್ರಿ” ಎಂದು ವೇದಿಕೆಯಿಂದ ಘೋಷಿಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ವೇದಿಕೆ ಮೇಲೆಯೇ ಕೂತು ಹೈಡ್ರಾಮಾ ಮಾಡಿದ ಮುನಿರತ್ನ ಅವರನ್ನ ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ.
ಇದು ಕಾಂಗ್ರೆಸ್ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮ ಎಂದು ಜೋರಾಗಿ ಕೂಗಿದ್ದಾರೆ. ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ವೇದಿಕೆ ಮೇಲೆಯೇ ಕೂತು ಹೈಡ್ರಾಮಾ ಮಾಡಿದ ಮುನಿರತ್ನ ಅವರನ್ನ ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ.
ಇನ್ನು ಮುನಿರತ್ನ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ರೇಪಿಸ್ಟ್ ಮುನಿ ಎಂದು ಕೂಗಿದ್ದಾರೆ. ಇದೇ ವೇಳೆ ಮಾತಾಡಿದ ಡಿಕೆ ಶಿವಕುಮಾರ್, ಇವರದ್ದು ಬರೀ ರಾಜಕೀಯನೇ ಆಯ್ತು ಬಿಡಿ ಎಂದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಮುನಿರತ್ನ ಅವರನ್ನು ಪೊಲೀಸರು ಜೆಪಿ ಪಾರ್ಕ್ನಿಂದ ಕರೆದೊಯ್ದರು.

ಇದನ್ನು ನೋಡಿ : ಜೆಪಿ ಪಾರ್ಕ್ನಲ್ಲಿ ಗಲಾಟೆ ಮಾಡಿದ ಶಾಸಕ ಮುನಿರತ್ನ ಅವರನ್ನು ಎಳೆದೊಯ್ದ ಪೊಲೀಸರು

