Coldrif Syrup Ban : ದೆಹಲಿ ಸರ್ಕಾರವು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟವನ್ನು ನಿಷೇಧಿಸಿದೆ.

ಮಧ್ಯಪ್ರದೇಶದಲ್ಲಿ ಕೋಲ್ಡ್ರಿಫ್ (Coldriff) ಕೆಮ್ಮಿನ ಸಿರಪ್ ಸೇವನೆಯ ಬಳಿಕ 20 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ, ದೆಹಲಿ ಸರ್ಕಾರ ತೀವ್ರ ಕ್ರಮ ಕೈಗೊಂಡಿದೆ. ಇದೀಗ ಈ ಸಿರಪ್ ಅನ್ನು ರಾಜಧಾನಿಯ ಎಲ್ಲಾ ಔಷಧಾಲಯಗಳಲ್ಲಿ ಮಾರಾಟ ಹಾಗೂ ಖರೀದಿಗೆ ನಿಷೇಧ ಹೇರಲಾಗಿದೆ.
ಗುಣಮಟ್ಟವಿಲ್ಲದ ಸಿರಪ್ : ತನಿಖೆಯಲ್ಲಿ ಶಾಕಿಂಗ್ ಮಾಹಿತಿ
ಮಧ್ಯಪ್ರದೇಶದಲ್ಲಿ ನಡೆದ ಪರಿಶೀಲನೆ ವೇಳೆ, ಕೋಲ್ಡ್ರಿಫ್ ಸಿರಪ್ ಗುಣಮಟ್ಟವಿಲ್ಲದ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ವರದಿಯ ಬಳಿಕ ದೆಹಲಿ ಆರೋಗ್ಯ ಇಲಾಖೆ ತಕ್ಷಣ ನಿಷೇಧದ ಆದೇಶ ಹೊರಡಿಸಿದೆ.
ಸಿರಪ್ ಸೇವಿಸಿ ಮಕ್ಕಳ ಆರೋಗ್ಯ ಹದಗೆಟ್ಟು, ಸಾವಿಗೆ ದಾರಿ
ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಮಕ್ಕಳಿಗೆ ವೈದ್ಯರು ಕೋಲ್ಡ್ರಿಫ್ ಸಿರಪ್ ನೀಡಿದ್ದರು. ಆದರೆ ಸಿರಪ್ ಸೇವನೆಯ ಬಳಿಕ ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಟ್ಟು, ಕೆಲವು ಗಂಟೆಗಳೊಳಗೆಯೇ ಹಲವಾರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿಯವರೆಗೂ 20 ಮಕ್ಕಳು ಮೃತಪಟ್ಟಿದ್ದಾರೆ ಎಂಬ ಮಾಹಿತಿ ದೊರೆತಿದೆ.\
ಇದನ್ನು ಓದಿ : ವಿಜಯಪುರದ ಹಲವೆಡೆ ಭೂಕಂಪನ

ಈ ಹಿಂದೆ ಶಿಫಾರಸು ನಿಷೇಧ ಆಗಿದ್ದರೂ ಸಿರಪ್ ನೀಡಿದ ವರದಿ
ಈ ಘಟನೆಯ ಹಿಂದೆಯೂ, 2021ರಲ್ಲಿ ದೆಹಲಿ ಸರ್ಕಾರ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಇರುವ ಸಿರಪ್ ಅನ್ನು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶಿಫಾರಸು ಮಾಡದಂತೆ ಆದೇಶಿಸಿತ್ತು. ಆದರೆ, ಕೆಲ ಮೊಹಲ್ಲಾ ಕ್ಲಿನಿಕ್ಗಳಲ್ಲಿ ಆ ನಿಯಮಗಳನ್ನು ಉಲ್ಲಂಘಿಸಿ ಈ ಸಿರಪ್ ನೀಡಲಾಗಿತ್ತು ಎಂಬ ಅಂಶ ವರದಿಯಾಗಿದೆ.
DGHS ಸೂಚನೆಯ ಬಳಿಕ ತಕ್ಷಣದ ನಿರ್ಧಾರ
ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ದೆಹಲಿ ಸರ್ಕಾರದ ಆರೋಗ್ಯ ಇಲಾಖೆ (DGHS-Delhi) ಗೆ ಪತ್ರ ಬರೆದು, 4 ವರ್ಷದೊಳಗಿನ ಮಕ್ಕಳಿಗೆ ಈ ಸಿರಪ್ ನೀಡಬಾರದೆಂದು ತೀವ್ರ ಸೂಚನೆ ನೀಡಿದೆ. ಕಲಾವತಿ ಸರನ್ ಆಸ್ಪತ್ರೆಯಲ್ಲಿ ಈ ಸಿರಪ್ ಬಳಸಿದ 16 ಪ್ರಕರಣಗಳಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯು ಸರ್ಕಾರದ ಕ್ರಮಕ್ಕೆ ಹಿನ್ನಲೆ ನೀಡಿದೆ.
ತಮಿಳುನಾಡು, ಕೇರಳದಲ್ಲೂ ನಿಷೇಧ
ಈ ಹಿಂದೆ ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಈ ಸಿರಪ್ನ ಮಾರಾಟವನ್ನು ನಿಷೇಧಿಸಿದ್ದವು. ಇದೀಗ ದೆಹಲಿ ಸಹ ಈ ಕ್ರಮ ಕೈಗೊಂಡಿರುವುದು, ಇಡೀ ದೇಶದ ಆರೋಗ್ಯ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.

ಇದನ್ನು ನೋಡಿ : ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟ ನಿಷೇಧಿಸಿದ ದೆಹಲಿ ಸರ್ಕಾರ




