Earthquake : ವಿಜಯಪುರ ತಾಲೂಕಿನ ಹಲವೆಡೆ ಭೂಕಂಪನದ ಅನುಭವವಾಗಿದೆ.

ನೆನ್ನ ರಾತ್ರಿ ಸುಮಾರು 10:01ಕ್ಕೆ ವಿಜಯಪುರ ಜಿಲ್ಲೆಯ ತಿಕೋಟ ಹಾಗೂ ವಿಜಯಪುರ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಈ ಭೂಕಂಪನದ ವೇಳೆ ಜನರು ಭಾರೀ ಸದ್ದು ಕೇಳಿದ್ದಾಗಿ ತಿಳಿಸಿದ್ದಾರೆ. ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನ ತಕ್ಷಣವೇ ಮನೆಗಳಿಂದ ಹೊರಬಂದಿದ್ದಾರೆ.
ಈ ಭಾಗಗಳಲ್ಲಿ ಕಂಪನದ ಅನುಭವ
ಭೂಕಂಪನದ ಪರಿಣಾಮ ತಿಕೋಟ, ಹೊನ್ನೂಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಸೇರಿ, ಹಲವು ಗ್ರಾಮಗಳಲ್ಲಿ ಕಂಪನದ ಅನುಭವವಾಗಿದೆ. ವಿಜಯಪುರ ಗ್ರಾಮೀಣ ಪ್ರದೇಶದ ಸುಮಾರು 12 ಕಿ.ಮೀ ವ್ಯಾಪ್ತಿಯಲ್ಲಿ ಈ ಕಂಪನ ಭಾಸವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಭೂಕಂಪನದ ತೀವ್ರತೆ: 2.8 ರಿಕ್ರ್ ಸ್ಕೇಲ್
ಭೂಕಂಪನ ತೀವ್ರತೆಯನ್ನು ಹಲವು ಭೂಕಂಪ ಆ್ಯಪ್ಗಳು 2.8 ರಿಕ್ಟರ್ ಸ್ಕೇಲ್ ಎಂದು ದಾಖಲಿಸಿವೆ. ತೀವ್ರತೆ ಕಡಿಮೆ ಇದ್ದರೂ, ಆಗಾಗ್ಗೆ ಕಂಪನವಾಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಇದನ್ನು ಓದಿ : CSK ತಂಡದಿಂದ 5 ಆಟಗಾರರು ಔಟ್..!

ಆಗಾಗ್ಗ ನಡೆಯುತ್ತಿರುವ ಭೂಕಂಪಗಳು
ಇನ್ನು ವಿಜಯಪುರ ಜಿಲ್ಲೆಯಲ್ಲಿ ಇದು ಮೊದಲನೆಯ ಭೂಕಂಪವಲ್ಲ. ಕಳೆದ ತಿಂಗಳಲ್ಲಿಯೇ ಸಿಂದಗಿ ಪಟ್ಟಣದಲ್ಲಿ ಸರಣಿ ಭೂಕಂಪನಗಳು ಸಂಭವಿಸಿತ್ತು. ಇದೀಗ ನಗರ ಭಾಗಕ್ಕೂ ಭೂಕಂಪನ ವಿಸ್ತರಿಸುತ್ತಿರುವುದರಿಂದ ಜನರಲ್ಲಿ ಆತಂಕ್ಕೀಡಾಗಿದ್ದಾರೆ.
ಅಧಿಕೃತ ಮಾಹಿತಿ ನಿರೀಕ್ಷೆ
ಈವರೆಗೂ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ನಷ್ಟದ ವರದಿಯಾಗಿಲ್ಲ. ಆದರೆ, ಭೂಗರ್ಭಶಾಸ್ತ್ರಜ್ಞರಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸ್ಥಳೀಯ ಆಡಳಿತ ಮತ್ತು NDRF ತಂಡಗಳು ಅಗತ್ಯವಿದ್ದರೆ ತಕ್ಷಣ ಸ್ಪಂದನೆ ನೀಡಲು ಸಜ್ಜಾಗಿವೆ.
ಇದನ್ನು ನೋಡಿ : ವಿಜಯಪುರದ ಹಲವೆಡೆ ಭೂಕಂಪನ – ಭಾರೀ ಸದ್ದಿಗೆ ಬೆಚ್ಚಿಬಿದ್ದ ಜನ
ನಿರಂತರ ಭೂಕಂಪ
ವಿಜಯಪುರ ಜಿಲ್ಲೆಯ ಈ ಭೂಕಂಪಗಳು ಆ ಭಾಗದ ಭೂಗರ್ಭದಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಚಿಂತನೆಗೆ ಎಡೆಮಾಡಿಕೊಡುತ್ತಿವೆ. ಪರಿಸರಕ್ಕೆ ಮೌಲ್ಯ ನೀಡುವ ಸಮಯ ಸದ್ಯದಲ್ಲಿಯೇ ಬಂದಿದೆ ಎನ್ನುವುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.




