IPL 2026 : IPL 2026ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಿಂದ ಐವರು ಆಟಗಾರರು ಹೊರಬೀಳುವುದು ಬಹುತೇಕ ಖಚಿತವಾಗಿದೆ.

IPL 2026 ಮಿನಿ ಹರಾಜಿಗೆ ಇನ್ನೂ ಕೆಲವು ತಿಂಗಳು ಬಾಕಿ ಇದ್ದರೂ, ತಂಡಗಳು ಈಗಾಗಲೇ ತಯಾರಿ ಆರಂಭಿಸಿದ್ದವೆ. ಈ ನಡುವೆ, ದೊಡ್ಡ ಸುದ್ದಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಿಂದ ಬಂದಿದೆ. ಕಳೆದ ಸೀಸನ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗದ 5 ಪ್ರಮುಖ ಆಟಗಾರರನ್ನು CSK ತಂಡ ಹರಾಜಿಗೂ ಮುನ್ನ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಆ ಆಟಗಾರರು ಯಾರೆಂದರೆ…
1. ದೀಪಕ್ ಹೂಡಾ :
ಐಪಿಎಲ್ 2025 ರ ಮೆಗಾ ಹರಾಜಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ದೀಪಕ್ ಹೂಡಾ̈ Deepak Hooda ) ಅವರನ್ನು 1.70 ಕೋಟಿ ರೂ. ಗೆ ಖರೀದಿಸಿದ್ದರು. ಆದರೆ ಕಳೆದ ಸೀಸನ್ನಲ್ಲಿ 7 ಪಂದ್ಯಗಳನ್ನಾಡಿದ್ದ ಹೂಡಾ ಕಲೆಹಾಕಿದ್ದು ಕೇವಲ 31 ರನ್ಗಳು ಮಾತ್ರ. ಹೀಗಾಗಿ ಅವರನ್ನು ರಿಲೀಸ್ ಮಾಡಲು ಸಿಎಸ್ಕೆ ಫ್ರಾಂಚೈಸಿ ನಿರ್ಧರಿಸಿದೆ.

2. ವಿಜಯ್ ಶಂಕರ್ :
1.2 ಕೋಟಿ ರೂ.ಗೆ ಖರೀದಿಸಲಾದ ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ( Vijay Shankar) 6 ಪಂದ್ಯಗಳಲ್ಲಿ ಕೇವಲ 112 ರನ್ ಗಳಿಸಿದರು. ನಿರೀಕ್ಷೆಯಷ್ಟು ಪ್ರಭಾವ ಬೀರುವಲ್ಲಿ ವಿಫಲವಾದ ಶಂಕರ್ ಸಹ ಬಿಡುಗಡೆ ಆಗಲಿದ್ದಾರೆ.

3. ರಾಹುಲ್ ತ್ರಿಪಾಠಿ :
ಬರೋಬ್ಬರಿ 3.40 ಕೋಟಿ ರೂ.ಗೆ ಖರೀದಿಸಲಾದ ರಾಹುಲ್ ತ್ರಿಪಾಠಿ (Rahul Tripati) 5 ಪಂದ್ಯಗಳಲ್ಲಿ ಕೇವಲ 55 ರನ್ ಗಳಿಸಿದರು. ಈ ಕಾರಣದಿಂದ ಅವರನ್ನು ಸಹ ಬಿಡುಗಡೆ ಮಾಡಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಿರ್ಧರಿಸಿದೆ.
ಇದನ್ನು ನೋಡಿ : CSK ತಂಡದಿಂದ 5 ಆಟಗಾರರು ಔಟ್..!

4. ಸ್ಯಾಮ್ ಕರನ್ :
2.4 ಕೋಟಿ ರೂ. ಸಂಭಾವನೆ ಪಡೆದ ಇಂಗ್ಲಿಷ್ ಆಲ್ರೌಂಡರ್ ಸ್ಯಾಮ್ ಕರನ್ (Sam Curran ) 5 ಪಂದ್ಯಗಳಲ್ಲಿ ಕೇವಲ 114 ರನ್ ಮತ್ತು 1 ವಿಕೆಟ್ ಮಾತ್ರ ಪಡೆದಿದ್ದಾರೆ. ಫಾರ್ಮ್ ಕೊರತೆಯ ಕಾರಣ ಸಿಎಸ್ ಅವರನ್ನು ಸಹ ಬಿಡುಗಡೆ ಮಾಡಲು ಸಿಎಸ್ಕೆ ಮುಂದಾಗಿದೆ.

5. ಡೆವೊನ್ ಕಾನ್ವೆ :
ಚೆನ್ನೈ ಸೂಪರ್ ಕಿಂಗ್ಸ್ ಪರ ಕಳೆದ ಕೆಲ ವರ್ಷಗಳಿಂದ ಕಣಕ್ಕಿಳಿಯುತ್ತಿದ್ದ ಡೆವೊನ್ ಕಾನ್ವೆ ((Devon Conway ) ಅವರನ್ನು ಸಹ ಈ ಬಾರಿ ಬಿಡುಗಡೆ ಮಾಡಲು ಸಿಎಸ್ಕೆ ನಿರ್ಧರಿಸಿದೆ. ಏಕೆಂದರೆ ಕಳೆದ ಸೀಸನ್ನಲ್ಲಿ ಕಾನ್ವೆ 6 ಪಂದ್ಯಗಳಿಂದ ಕೇವಲ 156 ರನ್ ಮಾತ್ರ ಕಲೆಹಾಕಿದ್ದರು. ಇದೀಗ ಕಳಪೆ ಫಾರ್ಮ್ನಲ್ಲಿರುವ ಡೆವೊನ್ ಕಾನ್ವೆ ಯನ್ನು ಬಿಡುಗಡೆ ಮಾಡಿ 6.25 ಕೋಟಿ ರೂ. ಪರ್ಸ್ ಮೊತ್ತ ಹೆಚ್ಚಿಸಲು ಸಿಎಸ್ಕೆ ಫ್ರಾಂಚೈಸಿ ನಿರ್ಧರಿಸಿದೆ.
ಇದನ್ನು ಓದಿ : ತುಮಕೂರಿಗೆ ನೂತನ ಜಿಲ್ಲಾಸ್ಪತ್ರೆ : ಡಾ. ಜಿ. Parameshwar
ಈ ನಾಲ್ವರು ಭಾರತೀಯರು ಮತ್ತು ಒಬ್ಬ ವಿದೇಶಿ ಆಟಗಾರನನ್ನು ಬಿಡುಗಡೆ ಮಾಡುವ ಮೂಲಕ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ಸ್ಟ್ರಾಟೆಜಿಗೆ ವೇದಿಕೆ ಸಿದ್ಧಪಡಿಸುತ್ತಿದೆ. ಇನ್ನು ಮುಂದೆ ಅವರು ಯಾವ ಆಟಗಾರರನ್ನು ಟಾರ್ಗೆಟ್ ಮಾಡಲಿದ್ದಾರೆ ಎನ್ನುವುದು ಕುತೂಹಲದ ವಿಷಯವೇ ಸರಿ.

ಈ ನಾಲ್ವರು ಭಾರತೀಯರು ಮತ್ತು ಒಬ್ಬ ವಿದೇಶಿ ಆಟಗಾರನನ್ನು ಬಿಡುಗಡೆ ಮಾಡುವ ಮೂಲಕ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ಸ್ಟ್ರಾಟೆಜಿಗೆ ವೇದಿಕೆ ಸಿದ್ಧಪಡಿಸುತ್ತಿದೆ.




