IPL 2026 Mini Auction : IPL 2026 ಮಿನಿ ಹರಾಜು ಡಿಸೆಂಬರ್ 13-15 ರ ನಡುವೆ ನಡೆಯಲಿದೆ. ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳಲು ನವೆಂಬರ್ 15 ರವರೆಗೆ ಸಮಯಾವಕಾಶ. CSK ಮತ್ತು RR ತಂಡದಿಂದ ಕೆಲವು ಪ್ರಮುಖ ಆಟಗಾರರ ಬಿಡುಗಡೆ ಸಾಧ್ಯತೆ.

IPL 2026 Mini Auction: ಡಿಸೆಂಬರ್ 13-15 ರ ನಡುವೆ ಹರಾಜು
IPL 2026 ಸೀಸನ್ಗೆ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ತಯಾರಿ ಶುರುಮಾಡಿವೆ. BCCI ಮುಂಬರುವ ಮಿನಿ ಹರಾಜಿಗೆ ದಿನಾಂಕ ನಿಗದಿಪಡಿಸಿದ್ದು, ಹರಾಜು ಡಿಸೆಂಬರ್ 13 ಮತ್ತು 15 ರ ನಡುವೆ ನಡೆಯುವ ಸಾಧ್ಯತೆ ಇದೆ.
ಫ್ರಾಂಚೈಸಿಗಳಿಗೆ ಆಟಗಾರರನ್ನು ಉಳಿಸಿಕೊಳ್ಳಲು ಕೊನೆಯ ದಿನಾಂಕ ನವೆಂಬರ್ 15. ಈ ದಿನಾಂಕದೊಳಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು BCCIಗೆ ಸಲ್ಲಿಸಬೇಕಾಗಿದೆ.

MUST READ : Jasprit Bumrah : ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 93 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಗಿ Jasprit Bumrah
ಹರಾಜು ಸ್ಥಳ: ಭಾರತದಲ್ಲಿ ಅಥವಾ ವಿದೇಶದಲ್ಲಿ?
ಹರಾಜಿನ ಸ್ಥಳ ಇನ್ನೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ. IPL 2023 ಹರಾಜು ದುಬೈ, 2024 ಹರಾಜು ಜೆಡ್ಡಾದಲ್ಲಿ ನಡೆದಿತ್ತು. ಪ್ರಸ್ತುತ ವರದಿಗಳ ಪ್ರಕಾರ, ಈ ಬಾರಿ ಹರಾಜು ಭಾರತದಲ್ಲಿ ನಡೆಯುವ ಸಾಧ್ಯತೆ ಹೆಚ್ಚು.
ಫ್ರಾಂಚೈಸಿಗಳ ಆಟಗಾರ ಉಳಿಸುವ/ಬಿಡುವ ತಂತ್ರಗಳು
- ಚೆನ್ನೈ ಸೂಪರ್ ಕಿಂಗ್ಸ್ (CSK) ಈ ಹರಾಜಿನಲ್ಲಿ ದೀಪಕ್ ಹೂಡಾ, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರನ್, ಡೆವೊನ್ ಕಾನ್ವೇ ಅವರನ್ನು ಬಿಡುಗಡೆ ಮಾಡಬಹುದು.
- ಅಶ್ವಿನ್ ನಿವೃತ್ತಿ ಪಡೆಯುವುದರಿಂದ ತಂಡದ ಪರ್ಸ್ನಲ್ಲಿ ಹೆಚ್ಚಿನ ಹಣ ಉಳಿಯುತ್ತದೆ.
- ರಾಜಸ್ಥಾನ ರಾಯಲ್ಸ್ (RR) ವನಿಂದು ಹಸರಂಗ ಮತ್ತು ಮಹೇಶ್ ತೀಕ್ಷಣ ಸೇರಿದಂತೆ ಕೆಲ ಸ್ಪಿನ್ನರ್ಗಳನ್ನು ಬಿಡುಗಡೆ ಮಾಡಬಹುದು.
- ಸಂಜು ಸ್ಯಾಮ್ಸನ್ ಮುಂದಿನ ಸೀಸನ್ನಲ್ಲಿ ಬೇರೆ ತಂಡದ ಪರ ಆಡುವ ಸಾಧ್ಯತೆ ಇದೆ.
ಹರಾಜು ಮುನ್ನೆಲ್ಲಾ ಫ್ರಾಂಚೈಸಿಗಳಿಗೆ ಸಮಯಾವಕಾಶ
ಫ್ರಾಂಚೈಸಿಗಳು ತಮ್ಮ ಟೀಮ್ ರಿಟೆನ್ಶನ್ (players retention) ನಿರ್ಧಾರವನ್ನು ನವೆಂಬರ್ 15 ರೊಳಗೆ ತೆಗೆದುಕೊಳ್ಳಬೇಕು.
ಚೆನ್ನೈ ಮತ್ತು ರಾಜಸ್ಥಾನ ಹೊರತುಪಡಿಸಿ, ಉಳಿದ ತಂಡಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ ಎಂದು ವರದಿಗಳು ತಿಳಿಸುತ್ತವೆ.
MUST WATCH : ಅಬ್ಬಬ್ಬಾ… SURESH GOWDA ಬರ್ತ್ ಡೇಗೆ – ನೂರಾರು ಕಾರುಗಳಲ್ಲಿ ಬಂದ ಫ್ಯಾನ್ಸ್..!




