Tumakuru Rain News:ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾಚಘಟ್ಟದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ರಸ್ತೆ ಜಲಾವೃತವಾಗಿದೆ. ಸವಾರರು ಪರದಾಡುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿವೆ. Tumakuru Heavy Rain News 2025.

Tumakuru Rain News: ತುಮಕೂರಿನಲ್ಲಿ ಬಿರುಬಿಸಿಲಿನ ಮಧ್ಯೆ ಭಾರೀ ಮಳೆ
ರಾಜ್ಯದ ಹಲವೆಡೆ ಬಿರುಬಿಸಿಲಿನ ನಡುವೆ ಮಳೆ ಸುರಿಯುತ್ತಿದೆ. ತುಮಕೂರು ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸುರಿದ ಮಳೆ ಕೆಲವೆಡೆ ತಂಪೆರೆದರೆ, ಮತ್ತೊಂದೆಡೆ ಅವಾಂತರಗಳನ್ನೂ ಸೃಷ್ಟಿಸಿದೆ. ಬಿಸಿಲಿನಿಂದ ತತ್ತರಿಸಿದ ಜನರಿಗೆ ಮಳೆರಾಯ ಆಶೀರ್ವಾದವಾದರೂ, ಕೆಲವೆಡೆ ಬಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
Rain News ಮಾಚಘಟ್ಟ ರಸ್ತೆ ಜಲಾವೃತ — ಸವಾರರ ಪರದಾಟ
ತಿಪಟೂರು ತಾಲೂಕಿನ ಮಾಚಘಟ್ಟ ಪ್ರದೇಶದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಹಳ್ಳ-ಕೊಳ್ಳಗಳು ತುಂಬಿ, ನೀರು ರಸ್ತೆ ಮೇಲೆ ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಬಳ್ಳೇಕೆರೆ ಗ್ರಾಮಕ್ಕೆ ತೆರಳುವ ಸೇತುವೆ ಕೂಡ ಮಳೆನೀರಿನಿಂದ ಮುಚ್ಚಲ್ಪಟ್ಟಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
MUST READ : Jasprit Bumrah : ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 93 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಗಿ Jasprit Bumrah
Rain News ತೋಟಗಳು ಜಲಾವೃತ — ರೈತರ ಚಿಂತೆ
ಮಳೆಯಿಂದಾಗಿ ತೆಂಗು ಮತ್ತು ಅಡಿಕೆ ತೋಟಗಳು ಕೂಡ ನೀರಿನಲ್ಲಿ ಮುಳುಗಿವೆ. ಒಂದೆಡೆ ರೈತರಿಗೆ ಮಳೆ ಸಂತಸ ತಂದಿದ್ದರೆ, ಮತ್ತೊಂದೆಡೆ ಅವರ ಬೆಳೆಗಳಿಗೆ ಹಾನಿ ಉಂಟಾಗುವ ಭಯ ಹೆಚ್ಚಾಗಿದೆ.
ಆಡಳಿತ ಎಚ್ಚರ ವಹಿಸಲು ಕರೆ
ಮಳೆ ಆರಂಭಕ್ಕೂ ಮುನ್ನವೇ ಕೆಲವು ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಎಚ್ಚರ ವಹಿಸಬೇಕಾಗಿದೆ.
ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಭಾರೀ ಮಳೆಯಿಂದ ರೈತರಿಗೂ ಸಾಮಾನ್ಯ ಜನರಿಗೂ ತೊಂದರೆ ಉಂಟಾಗಿದೆ. ಪ್ರಕೃತಿ ತನ್ನ ರೌದ್ರರೂಪ ತೋರಿಸುತ್ತಿರುವ ಈ ಸಮಯದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು.
MUST WATCH : ಅಬ್ಬಬ್ಬಾ… SURESH GOWDA ಬರ್ತ್ ಡೇಗೆ – ನೂರಾರು ಕಾರುಗಳಲ್ಲಿ ಬಂದ ಫ್ಯಾನ್ಸ್..!




