Kantara Chapter 1 : ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದ್ದು, ಕೇವಲ 8 ದಿನಗಳಲ್ಲಿ 500 ಕೋಟಿಯ ಸನಿಹಕ್ಕೆ ತಲುಪಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರವು ‘ಕೆಜಿಎಫ್ 1’ ಮತ್ತು ‘ಕಾಂತಾರ’ ಹಳೆಯ ದಾಖಲೆಗಳನ್ನು ಮುರಿದಿದೆ.

Kantara Chapter 1 : ಕಾಂತಾರ ದಾಖಲೆಯನ್ನು ಒಂದೇ ವಾರದಲ್ಲಿ ಮುರಿದ ಕಾಂತಾರ ಚಾಪ್ಟರ್ 1
ಸಿನಿಮಾ ರಿಲೀಸ್ ಆಗಿ ಕೇವಲ ಎಂಟು ದಿನಗಳಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ಈ ಸಿನಿಮಾ ಈಗಾಗಲೇ ದಾಖಲೆಗಳ ಮಳೆ ಸುರಿಸಿದೆ.
ಎಂಟು ದಿನಗಳಲ್ಲಿ ಭಾರಿ ಗಳಿಕೆ
‘ಕಾಂತಾರ: ಚಾಪ್ಟರ್ 1’ ಚಿತ್ರವು ಎಂಟು ದಿನಗಳಲ್ಲಿ ಭಾರತದಲ್ಲಿ 330 ಕೋಟಿ ರೂ., ಹಾಗೂ ವಿಶ್ವದಾದ್ಯಂತ 480 ಕೋಟಿ ರೂ. ಗಳಿಕೆ ಮಾಡಿದೆ. ವಾರದ ದಿನಗಳಲ್ಲಿಯೂ ಸಹ ಸಿನಿಮಾದ ಕಲೆಕ್ಷನ್ನಲ್ಲಿ ಕುಸಿತ ಕಾಣಲಿಲ್ಲ.
- ಸೋಮವಾರ: ₹31.5 ಕೋಟಿ
- ಮಂಗಳವಾರ: ₹33.5 ಕೋಟಿ
- ಬುಧವಾರ: ₹25 ಕೋಟಿ
- ಗುರುವಾರ: ₹20.5 ಕೋಟಿ
ಇದರಿಂದ ಸಿನಿಮಾ ವಾರಾಂತ್ಯದಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.

MUST READ : BOOK MYSHOW ನಲ್ಲಿ Record Creates ಮಾಡಿದ Kantara Chapter 1!
ಹಳೆಯ ದಾಖಲೆಗಳಿಗೆ ವಿದಾಯ
ಈ ಹೊಸ ದಾಖಲೆಗಳಿಂದ ‘ಕಾಂತಾರ: ಚಾಪ್ಟರ್ 1’ ಸಿನಿಮಾ,
- 2022ರ ಕಾಂತಾರ (₹450 ಕೋಟಿ)
- ಹಾಗೂ 2018ರ ಕೆಜಿಎಫ್ 1 (₹250 ಕೋಟಿ)
ದಾಖಲೆಗಳನ್ನು ಒಂದೇ ವಾರದಲ್ಲಿ ಮುರಿದಿದೆ.
ಮಾತ್ರವಲ್ಲದೆ, ರಜನೀಕಾಂತ್ ನಟನೆಯ ಕೂಲಿ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ನನ್ನೂ ಹಿಂದಿಕ್ಕಿದೆ.
ಬಜೆಟ್ ಸಣ್ಣದಾದರೂ ಬೃಹತ್ ಯಶಸ್ಸು
ಹೋಂಬಾಳೆ ಫಿಲಮ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಕೇವಲ ₹125 ಕೋಟಿಯ ಬಜೆಟ್ ಇದ್ದರೂ, ಸಿನಿಮಾ 600 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಲು ಸಾಧ್ಯ ಎನ್ನಲಾಗುತ್ತಿದೆ.
ಇದು ಕನ್ನಡ ಚಲನಚಿತ್ರರಂಗಕ್ಕೆ ಮತ್ತೊಂದು ಪ್ಯಾನ್ ಇಂಡಿಯಾ ಯಶಸ್ಸಿನ ಕಥೆಯಾಗುತ್ತಿದೆ.
WATCH NOW : YALLAPURA | ಪಾದಚಾರಿ ರಸ್ತೆಯಿಲ್ಲ! ಜನರ ಪರದಾಟಕ್ಕೆ ಕಾರಣವಾದ ಪಾಲಿಕೆ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು!




