Karnataka Rain Alert : ರಾಜ್ಯದ ಹಲವು ಭಾಗಗಳಲ್ಲಿ ನಾಳೆಯೂ ಮಳೆ ಮುಂದುವರಿಯಲಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಹಲವು ಭಾಗಗಳಲ್ಲಿ ನಾಳೆಯೂ (ಅ.10) ಮಳೆ ಮುಂದುವರಿಯಲಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.
ಚಿಕ್ಕಮಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯ ಸಾಧ್ಯತೆ ಹಿನ್ನೆಲೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸಹ ಸಾಧಾರಣ ಮಳೆಯಾಗಲಿದೆ.
ಮಳೆ ಆಗಲಿರುವ ಜಿಲ್ಲೆಗಳು ಯಾವೆಲ್ಲ?
- ಸಾಧಾರಣ ಮಳೆ: ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಕೋಲಾರ
- ಗಾಳಿ ಮಳೆ: ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ
- ಗಾಳಿಯ ವೇಗ: ಗಂಟೆಗೆ 35–45 ಕಿ.ಮೀ.
- ಮೀನುಗಾರರಿಗೆ ಮುಂಜಾಗೃತಾ ಎಚ್ಚರಿಕೆ: ಸಮುದ್ರಕ್ಕೆ ಇಳಿಯಬಾರದು
ಇದನ್ನು ನೋಡಿ : ಹಾಸನಾಂಬೆ ದರ್ಶನ ಆರಂಭ – ಶಕ್ತಿ ದೇವತೆಯ ಪವಾಡ ಗೊತ್ತಿದ್ಯಾ?

ಮೋಡ ಕವಿದ ವಾತಾವರಣ ಈ ಜಿಲ್ಲೆಗಳಲ್ಲಿ
ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಈ ಜಿಲ್ಲೆಗಳಲ್ಲಿ ಮೋಡವಿರುವ ವಾತಾವರಣ ಇರಲಿದೆ.
ಬೆಂಗಳೂರು ನಗರದಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
- ಮೋಡಕವಿದ ವಾತಾವರಣ
- ಮಳೆಯ ಅಂದಾಜು: ಶೇಕಡಾ 80–100% ಮಳೆಯ ಸಾಧ್ಯತೆ
- ಮಳೆಯ ಪ್ರಮಾಣ: 23–26 ಮಿ.ಮೀ.
- ಗಾಳಿಯ ವೇಗ: 30–40 ಕಿ.ಮೀ./ಗಂ
- ತಾಪಮಾನ: ಗರಿಷ್ಠ 29°C, ಕನಿಷ್ಠ 20°C
ಇದನ್ನು ಓದಿ : ಕಲಬುರಗಿ, ಬೆಳಗಾವಿ ಸೇರಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ





