Kitchen Recipe : ಈ ಸುಲಭ ಮತ್ತು ರುಚಿಕರ ಮೆಂತ್ಯೆ ಮಟನ್ ರೆಸಿಪಿಯನ್ನು ಮನೆಯಲ್ಲೇ ತಯಾರಿಸಿ. ಎಲ್ಲ ಸ್ಟೆಪ್ಸ್, ಪದಾರ್ಥಗಳು ಮತ್ತು ಟಿಪ್ಸ್ ಸಹಿತ ರೆಸಿಪಿ ಇಲ್ಲಿದೆ.

Kitchen Recipe : ರುಚಿಕರ Methi Mutton ರೆಸಿಪಿ – ಮನೆಲ್ಲೇ ರೆಸ್ಟೋರೆಂಟ್ ಶೈಲಿ
ಬೇಕಾಗುವ ಪದಾರ್ಥಗಳು
- ಮೆಂತ್ಯೆ ಸೊಪ್ಪು – ಸ್ವಲ್ಪ
- ಮಟನ್ – ಅರ್ಧ ಕೆಜಿ
- ತೆಂಗಿನ ಹಾಲು – ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ
- ಹಸಿ ಮೆಣಸಿನಕಾಯಿ – ಸ್ವಲ್ಪ
- ಗರಂ ಮಸಾಲಾ ಪುಡಿ – 1 ಚಮಚ
- ಈರುಳ್ಳಿ – 1
- ಟೊಮ್ಯಾಟೋ – 1
- ಎಣ್ಣೆ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
ಇದನ್ನು ಓದಿ : ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ ಬಾಲಕಿಯ ಮೃತದೇಹ ಪತ್ತೆ
ಮಾಡುವ ವಿಧಾನ Methi Mutton
Kitchen Recipe : ಈರುಳ್ಳಿ ಮತ್ತು ಮೆಣಸಿನಕಾಯಿ ಫ್ರೈ
ಬಾಣಲೆಯಲ್ಲಿ ಎಣ್ಣೆ ಬಿಸಿಗಿಟ್ಟು ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗಿದ ಮೇಲೆ, ರುಬ್ಬಿಟ್ಟುಕೊಂಡ ಹಸಿ ಮೆಣಸಿನಕಾಯಿಯನ್ನು ಸೇರಿಸಿ ಸ್ವಲ್ಪ ಹುರಿಯಿರಿ.
ಮಟನ್ ಸೇರಿಸಿ ಫ್ರೈ
ಹುರಿದ ಮೆಣಸಿನಕಾಯಿಗೆ ಮಟನ್ ಹಾಕಿ ಚೆನ್ನಾಗಿ ಫ್ರೈ ಮಾಡಿ.
ಟೊಮ್ಯಾಟೋ ಮತ್ತು ಮೆಂತ್ಯೆ ಸೊಪ್ಪು
ಟೊಮ್ಯಾಟೋ ಸೇರಿಸಿ ಮೆತ್ತಗಾಗುವವರೆಗೆ ಕೈಯಾಡಿಸಿ. ನಂತರ ಮೆಂತ್ಯೆ ಸೊಪ್ಪು ಹಾಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಫ್ರೈ ಮಾಡಿ.
ತೆಂಗಿನ ಹಾಲು ಮತ್ತು ಗರಂ ಮಸಾಲಾ
ತೆಂಗಿನ ಹಾಲು ಮತ್ತು ಗರಂ ಮಸಾಲಾ ಪುಡಿ ಹಾಕಿ ಕುದಿಯಲು ಬಿಡಿ. ಸ್ವಲ್ಪ ಉಪ್ಪು ಸೇರಿಸಿ ಮತ್ತೆ ಕುದಿಸಿ. ಕೊನೆಗೆ ಕತ್ತರಿಸಿದ ಮೆಂತ್ಯೆ ಸೊಪ್ಪು ಹಾಕಿ ಸರ್ವ್ ಮಾಡಿ.
Tips for Best Taste
- ಮೆಂತ್ಯೆ ಸೊಪ್ಪನ್ನು ಹುರಿದು ಬಳಸಿದರೆ ರುಚಿ ಹೆಚ್ಚು ಬರುತ್ತದೆ.
- ಮಟನ್ ಚೆನ್ನಾಗಿ ಫ್ರೈ ಮಾಡಿದರೆ gravy ಸೊಂಪಾಗುತ್ತದೆ.
- ತೆಂಗಿನ ಹಾಲು ಮೊದಲು ಸ್ವಲ್ಪ ಮಾತ್ರ ಹಾಕಿ, ಕುದಿಸಿದ ಮೇಲೆ ರುಚಿಗೆ ತಕ್ಕಂತೆ ಹೆಚ್ಚಿಸಬಹುದು.
ಇದನ್ನು ನೋಡಿ : ಪೊಲೀಸರು ಸುಮ್ಮನೆ ಮುಖಂಡರ ಮೇಲೆ ATROCITY ದಾಖಲಿಸುತ್ತಿದ್ದಾರೆ




