Anvay Dravid : ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಈಗಾಗಲೇ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕ ಅಂಡರ್-19 ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಭಾರತೀಯ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಅಂಡರ್-19 ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಅವರು ತನ್ನ ಶಿಸ್ತು, ಸ್ಥಿರ ಪ್ರದರ್ಶನ ಹಾಗೂ ಶಾಂತ ನಡವಳಿಕೆಯಿಂದ ಈಗಾಗಲೇ ಗಮನ ಸೆಳೆದಿದ್ದಾರೆ.
ಅಕ್ಟೋಬರ್ 9 ರಿಂದ 17ರವರೆಗೆ ಡೆಹ್ರಾಡೂನ್ನಲ್ಲಿ ನಡೆಯಲಿರುವ ವಿನೂ ಮಂಕಡ್ ಟೂರ್ನಿಯಲ್ಲಿ ಈ ಯುವ ಪ್ರತಿಭೆ ತಂಡವನ್ನು ಮುನ್ನಡೆಸಲಿದ್ದಾರೆ..
ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿ ವಿಜೇತನಿಗೆ ನಾಯಕತ್ವದ ಮುಕುಟ
ಕಳೆದ ಭಾನುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನ್ವಯ್ ದ್ರಾವಿಡ್ “ಅತ್ಯುತ್ತಮ ಕಿರಿಯ ಬ್ಯಾಟರ್” ಪ್ರಶಸ್ತಿಗೆ ಭಾಜನರಾಗಿದ್ದರು. ಈ ಅವಾರ್ಡ್ ಅವರಿಗೆ ಮೊದಲೇನಲ್ಲ. 2024 ರ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿಯೂ ಅವರು ಅದೇ ಗೌರವ ಪಡೆದುಕೊಂಡಿದ್ದರು.
ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ
2025ರ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ 459 ರನ್ ಗಳಿಸಿ, ಅನ್ವಯ್ ಟೂರ್ನಿಯ ಅತ್ಯುತ್ತಮ ಬ್ಯಾಟರ್ ಎನಿಸಿಕೊಂಡರು. 8 ಇನಿಂಗ್ಸ್ಗಳಲ್ಲಿ 2 ಶತಕ, ಹಲವಾರು ಬೌಂಡರಿಗಳೊಂದಿಗೆ 91.80 ರನ್ ಸರಾಸರಿ ಅವರನ್ನು ಕಿರಿಯ ವಲಯದ ನಕ್ಷೆಮಾಡಿದ ಆಟಗಾರರಾಗಿ ಗುರುತಿಸಲು ಕಾರಣವಾಯಿತು.
ವಿಕೆಟ್ ಕೀಪರ್ – ನಾಯಕನಾಗಿ ಹೊಣೆ ಹೊತ್ತ ಯುವ ಪ್ರತಿಭೆ
ಇನ್ನು ವಿಕೆಟ್ ಕೀಪರ್ನ ಜವಾಬ್ದಾರಿ ಜೊತೆಗೆ ನಾಯಕತ್ವದ ಭಾರವನ್ನೂ ಹೊತ್ತಿರುವ ಅನ್ವಯ್, ಟೂರ್ನಿಯಲ್ಲಿ ತನ್ನ ನೈಪುಣ್ಯತೆಯಿಂದಲೇ ಪ್ರಭಾವ ಬೀರಬೇಕಾಗಿದೆ. ಅವರ ಶಿಸ್ತಾದ ನಡವಳಿಕೆ ಹಾಗೂ ತಾಂತ್ರಿಕ ಸಂಪನ್ನತೆ ತಂಡಕ್ಕೆ ಹಿತಕರವಾಗಲಿದೆ ಎಂಬ ನಿರೀಕ್ಷೆಯಿದೆ.

ಇದನ್ನು ನೋಡಿ : HEMAVATHI PROTEST | ಚಿಕ್ಕನಾಯಕನಹಳ್ಳಿಯಲ್ಲೂ ಹೇಮೆ ಕಿಚ್ಚು- ರೈತರ ಆಕ್ರೋಶ ಹೇಗಿತ್ತು..? | C N HALLI
ಕರ್ನಾಟಕ ಅಂಡರ್-19 ತಂಡ
ಅನ್ವಯ್ ದ್ರಾವಿಡ್ ನಾಯಕ ಹಾಗೂ ವಿಕೆಟ್ಕೀಪರ್ ಆಗಿದ್ದಾರೆ.
ಎಸ್. ಮಣಿಕಾಂತ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ತಂಡದಲ್ಲಿ ನಿತೀಶ್ ಆರ್ಯ, ಆದರ್ಶ್ ಡಿ. ಅರಸ್, ಪ್ರಣೀತ್ ಶೆಟ್ಟಿ, ವಾಸವ್ ವೆಂಕಟೇಶ್, ಅಕ್ಷತ್ ಪ್ರಭಾಕರ್, ಸಿ. ವೈಭವ್, ಕುಲದೀಪ್ ಸಿಂಗ್ ಪುರೋಹಿತ್, ರತನ್ ಬಿ.ಆರ್., ವೈಭವ್ ಶರ್ಮಾ, ಕೆ.ಎ. ತೇಜಸ್, ಅಥರ್ವ್ ಮಾಳವಿಯಾ, ಸನ್ನಿ ಕಾಂಚಿ ಮತ್ತು ರೆಹಾನ್ ಮೊಹಮ್ಮದ್ (ವಿಕೆಟ್ಕೀಪರ್) ಸೇರಿದ್ದಾರೆ.
ಭವಿಷ್ಯದ ನಾಯಕ?
ವಿನೂ ಮಂಕಡ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅನ್ವಯ್ ದ್ರಾವಿಡ್ ಮುಂದಿನ ಟೂರ್ನಿಗಳಲ್ಲೂ ನಾಯಕತ್ವ ನಿಭಾಯಿಸಲು ಮುನ್ನುಡಿಯಾಗಬಹುದು. ಜೊತೆಗೆ, ರಣಜಿ ಟ್ರೋಫಿಯ ಗಡಿಯನ್ನು ದಾಟಲು ಇದು ಸದುಪಯೋಗವಾಗಲಿದೆ.
ಕರ್ನಾಟಕ ರಣಜಿ ತಂಡಕ್ಕೆ ಮಯಾಂಕ್ ಅಗರ್ವಾಲ್ ನಾಯಕ
ಮುಂಬರುವ ರಣಜಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟವಾಗಿದ್ದು, ಮಯಾಂಕ್ ಅಗರ್ವಾಲ್ ನಾಯಕತ್ವ ವಹಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅವರು ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದಾರೆ. ವಿದರ್ಭ ಪರ ಆಡಿದ್ದ ಕರುಣ್ ನಾಯರ್ ಈ ಬಾರಿ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಕಾರಣದಿಂದ ಅವರು ಭಾರತ ತಂಡದಿಂದ ಹೊರಬಿದ್ದಿದ್ದರು.




