
NAGAVALLI : ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿಯಲ್ಲಿ ಅಗ್ನಿ ವಂಶ ಕ್ಷತ್ರಿಯರ ವತಿಯಿಂದ 19 ನೇ ವರ್ಷದ ಅದ್ಧೂರಿ ಗಣಪತಿ ವಿಸರ್ಜನಾ ಮಹೋತ್ಸವವನ್ನು ಆಚರಿಸಲಾಯ್ತು. ನಾಗವಲ್ಲಿಯಲ್ಲಿರೋ ಅಗ್ನಿವಂಶ ಕ್ಷತ್ರಿಯ ವಂಶಕ್ಕೆ ಸೇರಿದ ನೂರಾರು ಮಂದಿ ಕಳೆದ 18 ವರ್ಷದಿಂದಲೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಗಣೇಶ ಮಹೋತ್ಸವನ್ನು ಆಚರಣೆ ಮಾಡಲಾಗ್ತಿದ್ದು, ಅದ್ರಂತೆ ಈ ವರ್ಷವೂ ಅದ್ಧೂರಿಯಾಗಿ ಗಣೇಶ ಮಹೋತ್ಸವನ್ನು ಆಚರಿಸಲಾಯ್ತು.
19ನೇ ವರ್ಷದ ನಾಗವಲ್ಲಿಯ ಅಗ್ನಿ ವಂಶ ಕ್ಷತ್ರಿಯರ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನ ಮಹೋ ತ್ಸವಕ್ಕೆ ಹತ್ತಾರು ಹಳ್ಳಿಗಳಿಂದ ಜನರು ಆಗಮಿಸಿದ್ದು, ನಾಗವಲ್ಲಿಯ ಪ್ರಮುಖ ಬೀದಿಗಳಲ್ಲಿ ಗಣಪತಿ ಮೂರ್ತಿಯ ನ್ನು ಮೆರವಣಿಗೆ ನಡೆಲಾಯ್ತು. ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಭಾಗಿಯಾಗಿದ್ರೆ, ಮೆರವಣಿಗೆಗೆ ಕಲಾತಂಡ ಗಳು ಮೆರಗು ನೀಡಿದ್ವು.
ಇನ್ನು ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ನಾಗವಲ್ಲಿ ಪಟ್ಟಣದ ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಲಂಕಾರ ಮಾಡಲಾಗಿದ್ದು, ನೋಡುಗರ ಆಕರ್ಷಣಿಯವಾಗಿತ್ತು. ಅಲ್ದೇ ಭಕ್ತಾದಿಗಳಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು.




