Soladevanahalli Tragedy: ಭಾನುವಾರ ತಡರಾತ್ರಿ ಸೋಲದೇವನಹಳ್ಳಿಯಲ್ಲಿ ಮರ ಸ್ಕೂಟರ್ ಮೇಲೆ ಬಿದ್ದು 24 ವರ್ಷದ ಕೀರ್ತನಾ ಸ್ಥಳದಲ್ಲೇ ಸಾವು. ಮತ್ತೊಬ್ಬ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಭಾನುವಾರ ತಡರಾತ್ರಿ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಭಾರೀ ದುರ್ಘಟನೆ ಸಂಭವಿಸಿದೆ. ಮರವು ಸ್ಕೂಟರ್ ಸವಾರಿ ಮಾಡುತ್ತಿದ್ದ ಯುವತಿಯ ಮೇಲೆ ಬಿದ್ದ ಪರಿಣಾಮ, 24 ವರ್ಷದ ಕೀರ್ತನಾ ಎಂಬ ಯುವತಿ ಸಾವಿಗೀಡಾಗಿದೆ. ಮತ್ತೊಬ್ಬ ಸವಾರ ಭಾಸ್ಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಮೃತ ಯುವತಿಯದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಮಾಹಿತಿ ತಿಳಿಯುತ್ತಿದ್ದಂತೆ ಯುವತಿಯ ಪೋಷಕರು ಆಸ್ಪತ್ರೆಗೆ ಧಾವಿಸಿ ಆಕ್ರಂದನ ವ್ಯಕ್ತಪಡಿಸಿದ್ದಾರೆ.
Soladevanahalli Tragedy: ಘಟನೆ ಹಿನ್ನೆಲೆ
ಭಾನುವಾರ ರಜೆ ಇದ್ದುದರಿಂದ ಕೀರ್ತನಾ ಮತ್ತು ಆಕೆಯ ಸ್ನೇಹಿತರು ಸ್ಯಾಂಡಲ್ವುಡ್ ಪ್ರೀಮಿಯರ್ ಲೀಗ್ ಪಂದ್ಯ ವೀಕ್ಷಿಸಲು ಹೊರಟಿದ್ದರು. ಪಂದ್ಯ ವೀಕ್ಷಿಸಿದ ಬಳಿಕ ಅವರು ಸ್ಕೂಟರ್ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ, ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಹತ್ತಿರ, ಭಾರೀ ಗಾತ್ರದ ಮರ ಅವರ ಮೇಲೆ ಉರುಳಿದೆ.
Soladevanahalli Tragedy: ಸ್ಥಳೀಯರ ತ್ವರಿತ ನೆರವು
ಮರ ಬಿದ್ದ ತಕ್ಷಣ ಸ್ಥಳೀಯರು ಸಹಾಯಕ್ಕೆ ಧಾವಿಸಿ ಮರದ ಕೊಂಬೆಗಳನ್ನು ತೆರವುಗೊಳಿಸಿದರು. ಗಾಯಾಳುಗಳನ್ನು ತಕ್ಷಣ ಹಾಸ್ಪಿಟಲ್ಗೆ ದಾಖಲಿಸಲಾಗಿದೆ. ಮರ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ನಂತರ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ಮರವನ್ನು ತೆರವುಗೊಳಿಸುತ್ತಿದ್ದರು.
WATCH THIS : YATNAL ON PRADEEP ESHWAR | ನಾನು ಮನುಷ್ಯರ ಬಗ್ಗೆ ಮಾತಾಡ್ತಿನಿ, Zoo ನಲ್ಲಿರುವ ಮೃಗಗಳ ಬಗ್ಗೆ ಅಲ್ಲ
Soladevanahalli Tragedy: ಸಾರ್ವಜನಿಕ ಆಕ್ರೋಶ
ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸ್ಥಳೀಯರು ಪೋಲೀಸರು ಮತ್ತು ಜಿಬಿಎ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಸುರಕ್ಷತೆ ಸೂಚನೆ
ಈ ಘಟನೆ ರೋಡ್ ಸುರಕ್ಷತೆ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ಭಾರೀ ಮರಗಳು, ಹಳೆಯ ಗಿಡಗಳು ಹಾಗೂ ನಿರ್ಲಕ್ಷ್ಯತೆಯಿಂದ ಸಂಭವಿಸಬಹುದಾದ ಅಪಾಯಗಳ ಕುರಿತು ಜನರು ಜಾಗೃತರಾಗಬೇಕಾಗಿದೆ.
Human skeleton found in ಬೆಂಗಳೂರು Apartment




