ಒಂದೇ ಒಂದು ಮಳೆಗೆ ಅರಸೀಕೆರೆ ಬಸ್ ಸ್ಟ್ಯಾಂಡ್ ಫುಲ್ ಡ್ಯಾಮೆಜ್

ರಾಜ್ಯಾದ್ಯಂತ ಮಳೆಯಾಗುತ್ತಿದೆ. ಇತ್ತ ಇಂದು ಅರಸೀಕೆರೆಯಲ್ಲಿ ಸುರಿದ ಮಳೆಗೆ ಕೆ ಎಸ್ ಆರ್ ಟಿಸಿಒ ಬಸ್ ಸ್ಟ್ಯಾಂಡ್ ನಲ್ಲಿ ಮಳೆ ನೀರು ಮುಂದೆ ಹೋಗದೆ, ಊರಿಂದ ಊರಿಗೆ ಹೋಗಲು ಬಂದಿದ್ದ ಜನರು ಓಡಾಡಲು ಪರದಾಡುವಂತಾಯಿತು.
ಹೌದು.. ಅರಸೀಕೆರೆ ಬಸ್ ನಿಲ್ದಾಣದಲ್ಲಿ ಸುರಿದ ಮಳೆಯಿಂದಾಗಿ ನೀರು ಡ್ರೈನೇಜ್ಗೆ ಪಾಸ್ ಆಗದೆ ನಿಂತ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸಿದ್ರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಪರದಾಡುತ್ತಿದ್ದರು. ಮತ್ತೆ ಕೆಲವರು ಕೊಚ್ಚೆ ನೀರಿನಲ್ಲಿಯೇ ನಡೆದು ಮುಂದೆ ಹೋಗ್ತಾ ಇದ್ರೆ, ಮತ್ತೆ ಕೆಲವರು ಬಳಸಿಕೊಂಡು ತಾವು ಏರುವ ಬಸ್ ಬಳಿ ತಲುಪಿದ್ರು.
ಪ್ರತಿನಿತ್ಯ ಅರಸೀಕೆರೆಯಿಂದ ಬೆಂಗಳೂರು ಶಿವಮೊಗ್ಗ ಮಂಗಳೂರು ರಾಜ್ಯದ ಹಲವಾರು ಜಿಲ್ಲೆ ಹಾಗೂ ಹಳ್ಳಿಗಳಿಗೆ ಹೋಗುವ ಸಾವಿರಾರು ಸಾರ್ವಜನಿಕರು ಪ್ರಯಾಣಿಸುತ್ತಾರೆ. ಇಂತಹ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯಾಗಲಿ, ಒಳಚರಂಡಿ ವ್ಯವಸ್ಥೆಯಾಗಲಿ ಚೆನ್ನಾಗಿರಬೇಕು. ಇಲ್ಲವಾದಲ್ಲಿ ಮಳೆ ಬಂತೆಂದರೆ ಜನರು ಕೊಚ್ಚೆ ನೀರಿನಲ್ಲಿಯೇ ಸಂಚರಿಸುವ ದುಸ್ಥಿತಿ ಎದುರಾಗುತ್ತದೆ. ಕೂಡಲೇ ಅರಸೀಕೆರೆ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕಿದೆ
https://prajashakthitv.com/?cat=46




