
Gruhalakshmi Scheme : GRUHA LAKSHMI ಯೋಜನೆಯಿಂದ ಸಿಕ್ಕ ಹಣವನ್ನು ಸಂಗ್ರಹಿಸಿ, ರಾಮನಗರದ ಬಿ.ಕೆ. ತುಳಸಿ (Tulasi) ಎಂಬ ಮಹಿಳೆಯೊಬ್ಬರು ಆಯುಧಪೂಜೆಯ ದಿನ ಹೊಸ Washing Machine ಖರೀದಿಸಿ, ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ನೂತನ ವಾಷಿಂಗ್ ಮಷಿನ್ ಗೆ ಗೃಹಿಣಿ ಪೂಜೆ ಸಲ್ಲಿಸುತ್ತಿರುವ Video ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಸಂತಸ ವ್ಯಕ್ತಪಡಿಸಿದ್ದಾರೆ.
ರಾಮನಗರದ ಗ್ಯಾರಂಟಿ ಯೋಜನೆಯ ಫಲಾನುಭವಿ ಬಿ.ಕೆ. ತುಳಸಿ ಅವರು ಗೃಹಲಕ್ಷ್ಮಿ ಯೋಜನೆಯಿಂದ ಪಡೆದ ಹಣವನ್ನು ಸರಿಯಾಗಿ ಬಳಸಿಕೊಂಡು, ಮಹಾನವಮಿಯಂದು ವಾಷಿಂಗ್ ಮಷಿನ್ ಖರೀದಿಸಿ ಪೂಜೆ ಸಲ್ಲಿಸಿರುವುದು ನನ್ನ ಹಬ್ಬದ ಸಂತೋಷವನ್ನು ಇಮ್ಮಡಿಯಾಗಿಸಿದೆ ಎಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ CM ತಿಳಿಸಿದ್ದಾರೆ.
“ಸ್ತ್ರೀ ಸಬಲೀಕರಣದ ಆಶಯದಿಂದ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆ, ನವರಾತ್ರಿಯಂತಹ ಸ್ತ್ರೀಶಕ್ತಿಯ ಆರಾಧನೆಯ ಸಂದರ್ಭದಲ್ಲಿ ಮಹಿಳೆಯೊಬ್ಬರ ಜೀವನದಲ್ಲಿ ಖುಷಿಗೆ ಕಾರಣವಾಗಿರುವುದು ಅತ್ಯಂತ ಸಾರ್ಥಕ. ಇಂತಹ ಇನ್ನಷ್ಟು ಕುಟುಂಬಗಳ ಖುಷಿಗೆ ನಮ್ಮ ಯೋಜನೆ ಸಾಕ್ಷಿಯಾಗಲಿ ಎಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ.




