
19 EV Bikes Burnt To Ashes In Yalachenahalli : ವಿಜಯದಶಮಿಯ ದಿನವೇ Silicon City ಯಲ್ಲಿ ಭಾರೀ ಅಗ್ನಿ ಅವಘಡ (Fire Accident) ಸಂಭವಿಸಿದೆ. ನಗರದ ಯಲಚೇನಹಳ್ಳಿಯ ಕನಕಪುರ ಮುಖ್ಯರಸ್ತೆಯಲ್ಲಿರುವ ಮೂರಂತಸ್ತಿನ Commercial ಕಟ್ಟಡದಲ್ಲಿ ಈ ದುರ್ಘಟನೆ ನಡೆದಿದೆ.
ಕಟ್ಟಡದ ಬೇಸ್ಮೆಂಟ್ನಲ್ಲಿ ಸ್ಥಾಪಿಸಲಾಗಿದ್ದ EV BIKE CHARGING POINT ನಲ್ಲಿ ಓವರ್ಹೀಟಿಂಗ್ ಕಾರಣದಿಂದಾಗಿ ಅಗ್ನಿ ಕಾಣಿಸಿಕೊಂಡಿದ್ದು, ಅದರಿಂದಾಗಿ ಅಲ್ಲಿ ನಿಲ್ಲಿಸಲಾಗಿದ್ದ 19 ಇವಿ ಬೈಕ್ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಕಟ್ಟಡದಲ್ಲಿ ಇತರ ಪ್ರದೇಶಗಳಿಗೂ ಬೆಂಕಿ ಹರಡಿದ್ದು, ಅಲ್ಲಿ ಇರಿಸಲಾದ ಆರು Gas Cylinder ಗಳಲ್ಲಿ ಗ್ಯಾಸ್ ಸೋರಿಕೆ ಸಂಭವಿಸಿದೆ. ಈ ನಡುವೆ ಒಂದು ಸಿಲಿಂಡರ್ Blast ಆಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜೊತೆಗೆ, Kumaraswamy Layout ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.




