
RCB up for sale : ಇಂಡಿಯನ್ ಪ್ರೀಮಿಯರ್ ಲೀಗ್ ನ (IPL) ಹಾಲಿ ಚಾಂಪಿಯನ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾರಾಟವಾಗಲಿರುವ ಸಾಧ್ಯತೆಗಳು ಇನ್ನಷ್ಟು ಬಲವಾಗುತ್ತಿವೆ. ದೇಶದ ಪ್ರಮುಖ ಉದ್ಯಮಿಯಾದ ಹಾಗೂ Serum Institute CEO ಆಗಿರುವ ಆದಾರ್ ಪೂನವಾಲ್ಲಾ (Adar Poonawalla) ಅವರು RCB Franchise ಖರೀದಿಗೆ ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ Diageo ನಿಯಂತ್ರಣದಲ್ಲಿರುವ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯು ಆರ್ಸಿಬಿ ಮಾರಾಟವಿಲ್ಲ ಎಂದು BSE ಗೆ ಲಿಖಿತವಾಗಿ ಸ್ಪಷ್ಟನೆ ನೀಡಿದ್ದರೂ, ಇದೀಗ ಆರ್ಸಿಬಿ ಮಾರಾಟದ ಮಾತುಗಳು ಮತ್ತೆ ಮೆರೆದುಕೊಂಡಿವೆ. X (ಹಳೆಯ ಟ್ವಿಟರ್) ನಲ್ಲಿ “ಸರಿಯಾದ ಮೌಲ್ಯಮಾಪನದಲ್ಲಿ, ಆರ್ಸಿಬಿ ಒಂದು ಉತ್ತಮ ತಂಡ…” ಎಂದು ಪೂನವಾಲ್ಲಾ ಬರೆದಿರುವುದು ಈ ಊಹಾಪೋಹಗಳಿಗೆ ಇನ್ನಷ್ಟು ಬಲ ನೀಡಿದೆ.
ವೃತ್ತಿಪರ ಮೂಲಗಳ ಪ್ರಕಾರ, ಸದ್ಯ ಪೂನವಾಲ್ಲಾ ಅವರು ಸುಮಾರು ₹17,762 ಕೋಟಿ ಮೌಲ್ಯದ ಆರ್ಸಿಬಿ ಫ್ರಾಂಚೈಸಿ ಖರೀದಿಸಲು ಮುಂಚೂಣಿಯಲ್ಲಿದ್ದಾರೆ. ಇನ್ನು ಆರ್ಸಿಬಿ ಫ್ರಾಂಚೈಸಿಗೆ ಆಸಕ್ತಿ ವ್ಯಕ್ತಪಡಿಸಿರುವ ಇತರ ಸಂಸ್ಥೆಗಳಿಗೆ ಅವರು ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಆರ್ಸಿಬಿಯು ಈ ವರ್ಷ IPL ಪ್ರಶಸ್ತಿ ಗೆಲ್ಲುವ ಮೂಲಕ ನೂರಾರು ಕೋಟಿ ಅಭಿಮಾನಿಗಳ ಕನಸನ್ನು ನನಸುಗೊಳಿಸಿತ್ತು. ಆದರೆ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಿಂದ 11 ಜನರು ಮೃತಪಟ್ಟ ದುಃಖದ ನಡೆದಿತ್ತು.




