CM Siddaramaiah inquires about Mallikarjun Kharge's health: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (MALLIKARJUN KHARGE) ಅವರು ಆರೋಗ್ಯವಾಗಿದ್ದು, ನಾಳೆ (ಅ.2) ಆಸ್ಪತ್ರೆಯಿಂದ Discharge ಆಗಲಿದ್ದಾರೆ ಎಂದು ಮುಖ್ಯಮಂತ್ರಿ Siddaramaiah ಅವರು ತಿಳಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆ ಇಂದು M.S. Ramaiah Hospital ಯಲ್ಲಿ ಖರ್ಗೆ ಅವರನ್ನು ದಾಖಲಿಸಲಾಗಿತ್ತು. ಇಂದು ಅವರನ್ನು ಭೇಟಿ ಮಾಡಿ CM ಸಿದ್ದರಾಮಯ್ಯ ಅವರು ಆರೋಗ್ಯ ವಿಚಾರಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಿಎಂ, "ಖರ್ಗೆ ಅವರು ಆರಾಮವಾಗಿ ಇದ್ದಾರೆ. ಸ್ವಲ್ಪ ಆಯಾಸವಾಗಿತ್ತು, Check Up ಮಾಡಿದ್ರು. ಈಗ ಆರೋಗ್ಯ ಸರಿ ಇದೆ. ಚೆನ್ನಾಗಿ ಮಾತನಾಡಿದರು. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ" ಎಂದು ಹೇಳಿದರು.