
SWR good news for passengers on Bengaluru-Mysore rail route : ದಸರಾ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಜನಸಂಚಾರ ಹೆಚ್ಚಾಗಲಿದ್ದು, ಈ ಹೆಚ್ಚಿದ ಓಡಾಟಕ್ಕೆ ಅನುಗುಣವಾಗಿ ನೈಋತ್ಯ ರೈಲ್ವೆ (SWR) ಬೆಂಗಳೂ ರು ವಿಭಾಗವು ಪ್ರಯಾಣಿಕರಿಗೆ ವಿಶೇಷ MEMU ರೈಲುಗಳ ವ್ಯವಸ್ಥೆ ಮಾಡಿದೆ. ಈ ಕ್ರಮದಿಂದಾಗಿ ದಸರಾ ಪ್ರಯಾಣಿಕರಿಗೆ ಬಹುದೊಡ್ಡ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಬೆಂಗಳೂರು-ಮೈಸೂರು ಸ್ಪೆಷಲ್ ರೈಲು (06287):
ಈ ರೈಲು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 2ರವರೆಗೆ ಪ್ರತಿದಿನವೂ ಸಂಜೆ 7.45ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣದಿಂದ ಹೊರಡುತ್ತದೆ. ಈ ರೈಲು ಮಧ್ಯದಲ್ಲಿ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಬೈಯದ್ರಹಳ್ಳಿ, ಚಂದ್ರಗಿರಿ ಕಪ್ಪಲ್ ಹಾಲ್ಟ್, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ, ರಾತ್ರಿ 10.40ಕ್ಕೆ ಮೈಸೂರು ತಲುಪಲಿದೆ.
ಮೈಸೂರು-ಬೆಂಗಳೂರು ಸ್ಪೆಷಲ್ ರೈಲು (06288):
ಅಕ್ಟೋಬರ್ 2ರವರೆಗೆ ಈ ರೈಲು ಪ್ರತಿದಿನ ರಾತ್ರಿ 10.55ಕ್ಕೆ ಮೈಸೂರು ನಿಲ್ದಾಣದಿಂದ ಹೊರಡಲಿದೆ. ಈ ರೈಲು ಮುಂದಿನ ದಿನ ಬೆಳಗ್ಗೆ 3.30ಕ್ಕೆ ಸ್ಮಿತ್ ಬೆಂಗಳೂರು (ಯಶವಂತಪುರ ಸಮೀಪ) ತಲುಪಲಿದೆ. ಈ ರೈಲು ಮಧ್ಯದಲ್ಲಿ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಬೈಯದ್ರಹಳ್ಳಿ, ಚಂದ್ರಗಿರಿ ಕಪ್ಪಲ್ ಹಾಲ್ಟ್, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ,
ಬೇರೆ ಮಾರ್ಗಗಳಲ್ಲೂ ವಿಶೇಷ ರೈಲುಗಳು:
ಕೇವಲ ಬೆಂಗಳೂರು-ಮೈಸೂರು ಮಾತ್ರವಲ್ಲದೇ, ಬೆಂಗಳೂರು-ಬೀದರ್, ಬೆಂಗಳೂರು-ಬೆಳಗಾವಿ, ಮೈಸೂರು-ಬೆಳಗಾವಿ ಮುಂತಾದ ಅನೇಕ ಮಾರ್ಗಗಳಲ್ಲೂ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಸಂಚಾರಕ್ಕೆ ಬಿಡಿದೆ. ಕೆಲ ರೈಲುಗಳು ದೀಪಾವಳಿವರೆಗೆ, ಅಂದರೆ ಡಿಸೆಂಬರ್ವರೆಗೆ ಕಾರ್ಯನಿರ್ವಹಿಸಲಿವೆ.
ಮುಂಗಡ ಬುಕ್ಕಿಂಗ್ ಅಗತ್ಯ:
ಇನ್ನು ಪ್ರಯಾಣಿಕರ ಓಡಾಟ ಹೆಚ್ಚಿರುವ ಹಿನ್ನಲೆಯಲ್ಲಿ ಮುಂಗಡ ಬುಕ್ಕಿಂಗ್ ಮೂಲಕ ಟಿಕೆಟ್ ಖರೀದಿಸಿ ಸುಲಭವಾಗಿ ಪ್ರಯಾಣಿಸಲು ಅಧಿಕಾರಿಗಳು ತಿಳಿಸಿದ್ದಾರೆ.




