India wins Asia Cuo final | Coach Gowtham Gambhir Celebrates : ಯಾವಾಗಲೂ ಗಂಭೀರವಾಗಿ ಕಾಣುವ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಏಷ್ಯ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಮಹತ್ತರ ಗೆಲುವನ್ನು ಅತ್ಯಂತ ಭಾವುಕವಾಗಿ ಸಂಭ್ರಮಿಸಿದರು.
ಪಂದ್ಯ ಆರಂಭಗೊಂಡು ಕೊನೆಯ ತನಕ ಸಿಡುಕು ಮೋರೆಯಲ್ಲಿ ಕಾಣಿಸಿಕೊಂಡಿದ್ದ ಗಂಭೀರ್, ರಿಂಕು ಸಿಂಗ್ ವಿನ್ನಿಂಗ್ ರನ್ ಬಾರಿಸುತ್ತಿದ್ದಂತೆ ತಮ್ಮ ಮುಂದಿದ್ದ ಟೇಬಲ್ಗೆ ಜೋರಾಗಿ ಬಡಿದು ಸಂಭ್ರಮಿಸಿದರು. ಇನ್ನು ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.ಬಳಿಕ ಮೈದಾನಕ್ಕೆ ತೆರಳಿ ತಂಡವನ್ನು ಗೆಲುವಿನ ದಡ ಸೇರಿಸಿದ ತಿಲಕ್ ವರ್ಮ ಅವರನ್ನು ಬಿಗಿದಪ್ಪಿಕೊಂಡು ಅಭಿನಂದಿಸಿದರು.
ಪಹಲ್ಗಾಮ್ ಘಟನೆ ಬಳಿಕ ಪೋಸ್ಟ್ ಹಂಚಿಕೊಂಡಿದ್ದ ಗಂಭೀರ್ “ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇದಕ್ಕೆ ಕಾರಣರಾದವರು ಖಂಡಿತ ಬೆಲೆ ತೀರಬೇಕಾಗುತ್ತದೆ,” ಎಂದು ಉಲ್ಲೇಖಿಸಿದ್ದರು. ಈ ಹಿಂದಿನ ಬೆದರಿಕೆ ಮೇಲ್ಗಳ ನಡುವೆಯೂ ಗಂಭೀರ್, ಪಾಕ್ ಎದುರಿನ ಈ ಗೆಲುವನ್ನು Nation Vs Nation ಎನಿಸುವ ಮಟ್ಟಕ್ಕೆ ತೆಗೆದುಕೊಂಡು, ತೀವ್ರ ಭಾವನೆಗಳಿಂದಲೇ ಸಂಭ್ರಮಿಸಿದರು.