BHIMA RIVER FLOOD: ಉತ್ತರ ಕರ್ನಾಟಕದಲಿ (NORTH KARNATAKA) ಭಾರೀ ಮಳೆ ಸುರಿಯುತ್ತಿದ್ದು. ಇದರಿಂದ ಭೀಮಾನದಿಯಲ್ಲಿ (BHIMA RIVER) ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ, ಯಾದಗಿರಿ ನಗರ (YADGIRI) ಮತ್ತು ನದಿ ಪಾತ್ರದ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ವೀರಭದ್ರೇಶ್ವರನಗರ ಹಾಗೂ ವಿಶ್ವರಾಧ್ಯನಗರ ಬಡಾವಣೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಯಲ್ಲಿ ಸಿಲುಕಿದವರನ್ನು ಎಸ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳ ಬೋಟ್ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಿದೆ. 20ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.
ಇನ್ನು ಪ್ರವಾಹದಿಂದ ಹಲವು ರಸ್ತೆಗಳು ಜಲಾವೃತವಾಗಿದ್ದು, ಯಾದಗಿರಿ - ನಾಯ್ಕಲ್ ರಾಜ್ಯ ಹೆದ್ದಾರಿ (State Highway) ಸಂಪೂರ್ಣವಾಗಿ ಮುಚ್ಚಲಾಗಿದೆ. ಸಿಂದಗಿ-ಕೊಡಂಗಲ್ ರಸ್ತೆಯ (ROAD) ಸಂಪರ್ಕವೂ ಕಡಿತವಾಗಿದೆ. ಕೆಲ ಸ್ಥಳಗಳಲ್ಲಿ ಸೇತುವೆ ಮೇಲೆಯೇ ವಾಹನ ಸವಾರರು ಜೀವದ ಹಂಗು ತೊರೆದು ಸಾಗುತ್ತಿದ್ದಾರೆ. ಅಲ್ದೇ ವಡಗೇರಾ ತಾಲೂಕಿನ ಬೆನಕನ ಹಳ್ಳಿ ಸೇರಿ ಜಿಲ್ಲೆಯ ಹಲವಾರು ಗ್ರಾಮಗಳು ಸಂಪರ್ಕವಿಲ್ಲದಂತಾಗಿವೆ. ಜನರು ನೆರವಿಗಾಗಿ ಪರದಾಡುತ್ತಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನದಿಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಯಾದಗಿರಿಯ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಸಾರಲಾಗುತ್ತಿದೆ. ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ನೀಡಲಾಗುತ್ತಿದೆ.