Mysuru ನಲ್ಲಿ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ. ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದ ಪತಿ ಬಳಿಕ ಪೊಲೀಸರಿಗೆ ಶರಣಾದ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

Mysuru : ಸಣ್ಣ ಕಾರಣಕ್ಕೆ ಆರಂಭವಾದ ಕೌಟುಂಬಿಕ ಕಲಹ ದಾರುಣ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮೈಸೂರು ಜಿಲ್ಲೆಯ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಮಹೇಶ್ ಎಂಬ ವ್ಯಕ್ತಿ ತನ್ನ ಪತ್ನಿ ಪುಷ್ಪ (24) ಅವರನ್ನು ಕೊಡಲಿಯಿಂದ ಹೊಡೆದು ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕ್ರೂರವಾಗಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಪುಷ್ಪ ಅವರು ದೇವರಾಜ ಅರಸು ರಸ್ತೆಯ ಖಾಸಗಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ತಡವಾಗಿ ಮನೆಗೆ ಬರುತ್ತಿದ್ದ ಕಾರಣ ದಂಪತಿಗಳ ನಡುವೆ ಅನುಮಾನ ಮತ್ತು ಜಗಳಗಳು ನಡೆಯುತ್ತಿತ್ತು.
MUST READ : Pre wedding ಶೂಟ್ಗೆ ಹೋಗುವಾಗ ಅಪಘಾತ – ವರನ ಸಾವು..!!

ಹತ್ಯೆ ಹೇಗೆ ನಡೆಯಿತು..?
ನಿನ್ನೆ ರಾತ್ರಿ ಪುಷ್ಪ ಕೆಲಸ ಮುಗಿಸಿ ಮನೆಗೆ ತಡವಾಗಿ ಬಂದಾಗ ಇದೇ ವಿಚಾರವಾಗಿ ದಂಪತಿಗಳ ನಡುವೆ ಜಗಳ ತೀವ್ರಗೊಂಡಿದೆ. ಆಕ್ರೋಶಗೊಂಡ ಮಹೇಶ್ ಮನೆಯಲ್ಲಿದ್ದ ಕೊಡಲಿಯಿಂದ ಪುಷ್ಪ ಅವರ ತಲೆಗೆ ಹೊಡೆದಿದ್ದಾನೆ. ಅವರು ಕೆಳಗೆ ಬಿದ್ದ ನಂತರ ಕೂಡ ನಿಲ್ಲಿಸದೆ, ದಿಂಬಿನಿಂದ ಮುಖ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರಿಗೆ ಶರಣಾದ ಆರೋಪಿ
ಘಟನೆಯ ನಂತರ ಮಹೇಶ್ ತಾನೇ ಪೊಲೀಸರಿಗೆ ಶರಣಾಗಿದ್ದು, ವಿಷಯ ತಿಳಿದ ಕೂಡಲೇ ನರಸಿಂಹರಾಜ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
MUST WATCH : ಬಿರುಗಾಳಿ ಸಹಿತ ಆಲಿಕಲ್ಲು RAIN – ಧರೆಗೆ ಉರುಳಿದ ಸಾಲು ಸಾಲು ಮರಗಳು..! | BENGALURU NEWS |




