ಇನ್ನೂ 15 ದಿನಗಳ ಬಳಿಕ Siddaramaiah ಸಿಎಂ ಆಗಿ ಇರುವುದಿಲ್ಲ ಎಂದು ಬಿಜೆಪಿ ಸಂಸದ Govind Karjol ಹೇಳಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿರುವ ಹಿನ್ನೆಲೆ, ಕಾಂಗ್ರೆಸ್ ಶಾಸಕರು ಮತ್ತು ಸಚಿವರ ನಡುವೆ ಸಂಪುಟ ಪುನರ್ ರಚನೆ ಹಾಗೂ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ಜೋರಾಗಿವೆ. ಈ ರಾಜಕೀಯ ಬೆಳವಣಿಗೆಗಳ ನಡುವೆಯೇ ಬಿಜೆಪಿ ಸಂಸದ Govind Karjol ಹೊಸ ಹೇಳಿಕೆ ನೀಡಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
MUST READ : ಮೇ 15ರೊಳಗೆ ಸಂಪುಟ ಪುನರ್ ರಚನೆ ಸಾಧ್ಯ – MLA Narayanaswamy ಸುಳಿವು ..!!

ಮಾತನಾಡಿದ ಅವರು, ಇನ್ನೂ 15 ದಿನಗಳ ಬಳಿಕ ಮುಖ್ಯಮಂತ್ರಿ Siddaramaiah ಸಿಎಂ ಆಗಿ ಇರುವುದಿಲ್ಲ ಎಂದು ಭವಿಷ್ಯವಾಣಿ ಮಾಡಿದ್ದಾರೆ. ಕುರ್ಚಿಗಾಗಿ ವಿಧಾನಸೌಧದಲ್ಲಿ ಆಡಳಿತವೇ ಇಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದರು.

ಇದೇ ವೇಳೆ, ಮೇ 4 ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಆ ಫಲಿತಾಂಶಗಳ ಪರಿಣಾಮ ರಾಜ್ಯ ರಾಜಕೀಯದ ಮೇಲೂ ಬೀಳಬಹುದು. ಸಿದ್ದರಾಮಯ್ಯ ಅವರ ಕುರ್ಚಿಯ ಭವಿಷ್ಯವೂ ಆ ಫಲಿತಾಂಶದೊಂದಿಗೆ ಸ್ಪಷ್ಟವಾಗಲಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
MUST WATCH : BENGALURU | ರಾಜ್ಯದಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ – ಧಗ ಧಗನೇ ಹೊತ್ತಿ ಉರಿದ ಶೆಡ್ ಗಳು..!




