ಮೇ 15ರೊಳಗೆ ಸಂಪುಟ ಪುನರ್ ರಚನೆಯ ಬಗ್ಗೆ ಶುಭ ಸುದ್ದಿ ಸಿಗಲಿದೆ ಎಂದು ಬಂಗಾರಪೇಟೆ ಶಾಸಕ Narayanaswamy ತಿಳಿಸಿದ್ದಾರೆ…

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ, ಸಂಪುಟ ಪುನರ್ ರಚನೆ ಕುರಿತು ಹೊಸ ಸುಳಿವು ನೀಡಿರುವ ಬಂಗಾರಪೇಟೆ ಶಾಸಕ S. Narayanaswamy, ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೇ ತಿಂಗಳ ಎರಡನೇ ವಾರದಲ್ಲಿ ಸಂಪುಟ ಪುನರ್ ರಚನೆ ಆಗೋ ವಿಶ್ವಾಸವಿದೆ ಎಂದು ತಿಳಿಸಿದರು.
MUST READ : Siddaramaiah ಪದತ್ಯಾಗಕ್ಕೂ ಸಿದ್ಧ – KN Rajanna ಹೊಸ ಹೇಳಿಕೆ..!

ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈಗಲೇ ಸಂಪುಟ ಪುನರ್ ರಚನೆ ಆಗಬೇಕು. ಈಗ ಮಂತ್ರಿ ಮಾಡಿದರೆ ಅವರಿಗೆ ಇನ್ನೊಂದು ವರ್ಷ ಕೆಲಸ ಮಾಡಲು ಸಮಯ ಸಿಗಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ವಿಶೇಷ ಮುತುವರ್ಜಿ ವಹಿಸಬೇಕು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಸಂಪುಟ ಪುನರ್ ರಚನೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ Mallikarjun Kharge ಅವರನ್ನು ಭೇಟಿ ಮಾಡಿದ್ದೇವೆ. ಈ ಸಂದರ್ಭದಲ್ಲಿ ಅವರು ನಮಗೆ ಭರವಸೆ ನೀಡಿದ್ದಾರೆ. ಕೆಲಸ ಮಾಡದ ಮಂತ್ರಿಗಳನ್ನು ಕೈಬಿಟ್ಟು ಹೊಸಬರನ್ನು ಸೇರಿಸಬೇಕು. 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಸಂಪುಟ ಪುನರ್ ರಚನೆ ಆಗಲೇಬೇಕು. ಮಂತ್ರಿ ಸ್ಥಾನ ಕೇಳೋದು ನಮ್ಮ ಹಕ್ಕು. ಮೇ 15ರೊಳಗೆ ಶುಭ ಸುದ್ದಿ ಬರಲಿದೆ ಎಂಬ ವಿಶ್ವಾಸವಿದೆ ಎಂದು ಶಾಸಕ ನಾರಾಯಣಸ್ವಾಮಿ ತಿಳಿಸಿದ್ದಾರೆ.
MUST WATCH : BENGALURU | ರಾಜ್ಯದಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ – ಧಗ ಧಗನೇ ಹೊತ್ತಿ ಉರಿದ ಶೆಡ್ ಗಳು..!




