Tamil Nadu ವಿಧಾನಸಭಾ ಚುನಾವಣೆಯಲ್ಲಿ ವಿಜಯ್, ಅಜಿತ್, ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮತ ಚಲಾವಣೆ ಮಾಡಿದ್ದಾರೆ.

Tamil Nadu : ಕಾಲಿವುಡ್ ನಟ ಅಜಿತ್ ಅವರು ಮುಂಜಾನೆಯೇ ಬಂದು ಮತ ಹಾಕಿದ್ದಾರೆ. ಈ ಮೊದಲು ಅವರು ರೇ್ ಕಾರಣಕ್ಕೆ ವಿದೇಶಕ್ಕೆ ತೆರಳಿದ್ದರು. ಅವರು ಮತ ಹಾಕಲು ಚೆನ್ನೈಗೆ ಬಂದಿದ್ದರು ಎನ್ನಲಾಗಿದೆ.

ಕಾಲಿವುಡ್ ಯುವ ನಟ ಶಿವ ಕಾರ್ತಿಕೇಯ ಅವರು ಕೂಡ ವೋಟ್ ಹಾಕಿದ್ದಾರೆ. ಮತ ಹಾಕಿದ ಬಳಿಕ ಅವರು ಇಂಕ್ ಹಾಕಿದ ಬೆರಳನ್ನು ತೋರಿಸಿದ್ದಾರೆ.
MUST READ : ಇಂದು SSLC Result 2026 ಪ್ರಕಟ..!!

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನೈನಲ್ಲಿ ಮತ ಹಾಕಿದರು. ಈ ವೇಳೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಧನುಷ್ ಅವರು ಕೂಡ ವೋಟ್ ಹಾಕಿದ್ದಾರೆ. ಈ ವೇಳೆ ಅವರ ಉದ್ದನೆಯ ಕೂದಲು ಗಮನ ಸೆಳೆದಿದೆ. ಇದು ಅವರ ಮುಂದಿನ ಸಿನಿಮಾ ಲುಕ್ ಇರಬಹುದು ಎಂದು ಅಭಿಮಾನಿಗಳು ಭಾವಿಸಿದ್ದಾರೆ.

ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ಬಂದು ಮತ ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ತಮ್ಮ ಕರ್ತವ್ಯ ಪೂರೈಸುವಂತೆ ಕರೆಕೊಟ್ಟಿದ್ದಾರೆ.

ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ತಮಿಳುನಾಡಿನ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ವಿಜಯ್ ಅವರು ಇಂದು ಚೆನ್ನೈನಲ್ಲಿ ವೋಟ್ ಹಾಕಿದರು. ಅವರು ಗೆಲ್ಲುವ ಭರವಸೆಯಲ್ಲಿದ್ದಾರೆ.


ಕಮಲ್ ಹಾಸನ್ ಅವರು ಮಗಳು ಶ್ರುತಿ ಹಾಸನ್ ಜೊತೆ ಬಂದು ವೋಟ್ ಹಾಕಿದ್ದಾರೆ. ಇಬ್ಬರೂ ವೋಟ್ ಹಾಕಿದ ಬಳಿಕ ಪೋಸ್ ಕೊಟ್ಟರು.
MUST WATCH : ಗುಬ್ಬಿಯಲ್ಲಿ AMBEDKAR ಜಯಂತಿ ಸಂಭ್ರಮ – ಅಂಬೇಡ್ಕರರ ಕೊಡುಗೆಯನ್ನ ಸ್ಮರಿಸಿದ ಮುಖಂಡರು | GUBBI NEWS |

