Modi ಉದ್ಘಾಟಿಸಬೇಕಿದ್ದ ರಿಫೈನರಿ ಘಟಕಕ್ಕೆ ಬೆಂಕಿ

ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 21) ಉದ್ಘಾಟನೆ ಮಾಡಬೇಕಿದ್ದ ರಾಜಸ್ಥಾನದ ಪಚಪದ್ರಾ ರಿಫೈನರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಘಟಕದ ಕೆಲವು ಭಾಗಗಳಿಗೆ ಗಂಭೀರ ಹಾನಿ
ರಾಜಸ್ಥಾನದ ಬಲೋತ್ರ ಸಮೀಪ ನಿರ್ಮಿಸಲಾದ ಈ ರಿಫೈನರಿ ಘಟಕಕ್ಕೆ ಏಕಾಏಕಿ ಬೆಂಕಿ ತಗುಲಿದ್ದು, ಘಟಕದ ಕೆಲವು ಭಾಗಗಳಿಗೆ ಗಂಭೀರ ಹಾನಿಯಾಗಿದೆ. ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
79,000 ಕೋಟಿ ಮೌಲ್ಯದ ರಿಫೈನರಿ ಘಟಕಕ್ಕೆ ಬೆಂಕಿ
ಸುಮಾರು ₹79,000 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಅತ್ಯಾಧುನಿಕ ರಿಫೈನರಿ ಘಟಕವನ್ನು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಮತ್ತು ರಾಜಸ್ಥಾನ ಸರ್ಕಾರ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದು ಭಾರತದ ಮೊದಲ ಗ್ರೀನ್ಫೀಲ್ಡ್ ರಿಫೈನರಿಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

READ THIS : DCRE ಇಲಾಖೆಯಲ್ಲೇ ದಲಿತ ಇನ್ಸ್ಪೆಕ್ಟರ್ಗೆ ಜಾತಿ ದೌರ್ಜನ್ಯ ಆರೋಪ
ಯಾವುದೇ ಸಾವು ನೋವು ಸಂಭವಿಸಿಲ್ಲ
ಇನ್ನು ಘಟನಾ ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕ ದಳದ ವಾಹನಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾವುದೇ ಸಾವು-ನೋವು ಸಂಬವಿಸಿಲ್ಲ.
ಕಾರ್ಯಕ್ರಮವನ್ನು ಮುಂದೂಡುವ ಸಾಧ್ಯತೆ – Modi
ನಾಳೆ ನಡೆಯಬೇಕಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ Modi ಹಾಗೂ ರಾಜ್ಯದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲು ಯೋಜಿಸಲಾಗಿತ್ತು. ಆದರೆ ಅಗ್ನಿ ಅವಘಡದ ಹಿನ್ನೆಲೆ ಕಾರ್ಯಕ್ರಮವನ್ನು ಮುಂದೂಡುವ ಸಾಧ್ಯತೆ ಇದೆ.

₹5,000 ಕೋಟಿ ಆದಾಯ ನಿರಿಕ್ಷೆ – Modi
ಈ ರಿಫೈನರಿ ಘಟಕದಿಂದ ವರ್ಷಕ್ಕೆ ಸುಮಾರು ₹5,000 ಕೋಟಿ ಆದಾಯವನ್ನು ರಾಜ್ಯ ಸರ್ಕಾರ ನಿರೀಕ್ಷಿಸಿತ್ತು. ಅಲ್ಲದೆ, ಮುದ್ರಾ ಬಂದರಿಗೆ ನೇರ ಸಂಪರ್ಕ ಹೊಂದಿರುವುದರಿಂದ ಸಾಗಣೆ ಮತ್ತು ಪೂರೈಕೆಯಲ್ಲಿ ಭಾರತಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಹೇಳಲಾಗಿತ್ತು.
MUST WATCH : ಭ್ರಷ್ಟರಿಗೆ ನಡುಕ ಹುಟ್ಟಿಸಿದ ಲೋಕಾ – ನಲಪಾಡ್ ಗೂ ಶಾಕ್ ಕೊಟ್ಟ ಅಧಿಕಾರಿಗಳು




