SC, ST ಮೇಲಿನ ದೌರ್ಜನ್ಯ ತನಿಖೆ ಮಾಡುವ DCRE ಯಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಕೇಸ್ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಪೊಲೀಸ್ ಅಧಿಕಾರಿಗೆ ಕಿರುಕುಳ ಆರೋಪ ಕೇಳಿಬಂದಿದೆ.
DCRE ಡಿಜಿ ಉಮೇಶ್ ಕುಮಾರ್ ಅವರಿಗೆ ದೂರು
DCRE ಕೇಂದ್ರ ಕಚೇರಿಯ ಎಸ್ಪಿ ಕರಿಬಸನಗೌಡ ಹಾಗೂ ಡಿವೈಎಸ್ಪಿ ಮಹೇಶ್ವರಗೌಡ ಮೇಲೆ ಕಿರಿಯ ಪೊಲೀಸ್ ಅಧಿಕಾರಿಯೊಬ್ಬರಿ ಈ ಒಂದು ಆರೋಪವನ್ನು ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ DCRE ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇರವಾಗಿ ಡಿಸಿಆರ್ಇ ಡಿಜಿ ಉಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.
READ THIS : ಕೃಷಿ ಇಲಾಖೆಯಲ್ಲಿ ಖಾಲಿ ಇರುವ 890 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಕಿರುಕುಳ
ಅಷ್ಟಲ್ಲದೆ ಈ ಬಗ್ಗೆ ಡಿಸಿಆರ್ಇ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ವೀಡಿಯೋ ಹೇಳಿಕೆ ಹರಿದು ಬಿಟ್ಟಿದ್ದಾರೆ. ಮೇಲ್ವರ್ಗದ ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಕಿರುಕುಳ ನೀಡಲಾಗ್ತಿದೆ. SP ಕರಿಬಸನಗೌಡ ನಿರ್ದೇಶನದಂತೆ ಕೆಲ ಕೇಸ್ಗಳಲ್ಲಿ ಮೇಲ್ಜಾತಿ ಆರೋಪಿಗಳ ಪರ ಅಂತಿಮ ವರದಿ ಸಲ್ಲಿಸಲು DySP ಒತ್ತಡ ಹಾಕುತ್ತಿದ್ದರು. ಆ ವೇಳೆ ವಲಯ SP ಅವರಿಂದ ನಿರ್ದೇಶನ ಕೊಡಿಸುವಂತೆ ಹೇಳಿದ್ದ ಕಾರಣ ಅಂದಿನಿಂದ Dysp ಮತ್ತು SP ಕರಿಬಸನಗೌಡ ಕಿರುಕುಳ ನೀಡುತ್ತಿದ್ದಾರೆ. ದೂರುದಾರರಿಂದ ತನ್ನ ವಿರುದ್ಧ ಸುಳ್ಳು ಪಿಟಿಷನ್ ಪಡೆದು ತನಿಖೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ವಿಡಿಯೋ ಹೇಳಿಕೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸಾಕಷ್ಟು ಚರ್ಚೆಗೆ ಗ್ರಾಸ
DCRE ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ವಿಡಿಯೋ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಅಂತಾ ಕಾದುನೋಡಬೇಕಿದೆ.

MUST WATCH : ರಸ್ತೆ ಬದಿಯಲ್ಲಿ ಮುಳ್ಳಿನ ಗಿಡಗಳ ಆರ್ಭಟ – ವಾಹನ ಸವಾರರಿಗೆ ದಿನನಿತ್ಯ ಸಂಕಷ್ಟ..!




