New Delhi : ಏರ್ಪೋರ್ಟ್ನಲ್ಲಿ ಆಕಾಸ-ಸ್ಪೈಸ್ಜೆಟ್ ವಿಮಾನ ಪರಸ್ಪರ ಡಿಕ್ಕಿ – ತಪ್ಪಿದ ಭಾರಿ ದುರಂತ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಏಪ್ರಿಲ್ 16) ಎರಡು ವಿಮಾನಗಳ ನಡುವೆ ಸಂಭವಿಸಿದ ಸಣ್ಣ ಮಟ್ಟದ ಡಿಕ್ಕಿಯಿಂದ ಭಾರೀ ಅನಾಹುತ ತಪ್ಪಿದೆ.
ಎರಡು ವಿಮಾನಗಳ ನಡುವೆ ಡಿಕ್ಕಿ
ಆಕಾಸ-ಸ್ಪೈಸ್ಜೆಟ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಎರಡೂ ವಿಮಾನದ ರೆಕ್ಕೆಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಪೈಸ್ಜೆಟ್ ಬಿ737-700 ವಿಮಾನದ ಬಲ ಭಾಗದ ರೆಕ್ಕೆಗೆ ಹಾನಿಯಾದರೆ, ಅಕಾಸ ಏರ್ ವಿಮಾನದ ಎಡ ಭಾಗ ಹಾನಿಗೊಳಗಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆಗೆ ಆದೇಶಿಸಲಾಗಿದೆ.
READ THIS : CSK ತಂಡದೊಂದಿಗೆ ಹೈದರಾಬಾದ್ಗೆ ಪ್ರಯಾಣ ಬೆಳೆಸಿದ Dhoni – ಮುಂದಿನ ಪಂದ್ಯದಲ್ಲಿ ಕಣಕ್ಕೆ?

ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ
ಈ ಡಿಕ್ಕಿ ತೀವ್ರವಾಗಿರಲಿಲ್ಲವಾದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ದೆಹಲಿಯಿಂದ ಹೈದರಾಬಾದ್ಗೆ ತೆರಳಬೇಕಿತ್ತು
ಹಾನಿಗೊಳಗಾದ ಆಕಾಸ ಏರ್ ವಿಮಾನ (QP 1406) ದೆಹಲಿಯಿಂದ ಹೈದರಾಬಾದ್ಗೆ ತೆರಳಬೇಕಿತ್ತು. ಘಟನೆ ಬಳಿಕ ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ಮತ್ತು ತಾಂತ್ರಿಕ ತಪಾಸಣೆಗಳನ್ನು ಕೈಗೊಳ್ಳಲಾಗಿದೆ.
MUST WATCH : ಪೊಲೀಸರ ಭರ್ಜರಿ ಕಾರ್ಯಾಚರಣೆ 11.8 ಕೋಟಿ ಮೌಲ್ಯದ ಡ್ರಗ್ ಸೀಜ್ ..!




