Dhoni ಅಭಿಮಾನಿಗಳಿಗೆ ಸಿಹಿ ಸುದ್ದಿ.

ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯಗೊಳ್ಳುವ ಸೂಚನೆಯೊಂದು ಲಭಿಸಿದ್ದು, ತಂಡ ದಿಗ್ಗಜ ಆಟಗಾರ ಎಂಎಸ್ ಧೋನಿ (MS Dhoni) ತಂಡಕ್ಕೆ ಮರಳುವಿಕೆಯ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ.
ಹೈದರಾಬಾದ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ
ತೊಡೆಸಂದು ಗಾಯದಿಂದಾಗಿ IPL 2026 ಆರಂಭದ ಎರಡು ವಾರಗಳಲ್ಲಿ ಹೊರಗುಳಿದಿದ್ದ ಧೋನಿ, ಈಗ CSK ತಂಡದೊಂದಿಗೆ ಸೇರಿಕೊಂಡು ಹೈದರಾಬಾದ್ಗೆ ಪ್ರಯಾಣಿಸಿದ್ದಾರೆ. ಶನಿವಾರ ನಡೆಯಲಿರುವ SRH ವಿರುದ್ಧದ ಪಂದ್ಯಕ್ಕಾಗಿ ಅವರು ಹೈದಯಾಬಾದ್ಗೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಅವರು ಹೈದರಾಬಾದ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

READ THIS : Karnataka Weather|ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ, ಯಾವಾಗಿನಿಂದ ಮಳೆ?
ಭಾರೀ ಚರ್ಚೆಗೆ ಗ್ರಾಸ
ಹಿಂದೆ ಗುವಾಹಟಿ ಮತ್ತು ಬೆಂಗಳೂರಿಗೆ ತಂಡದ ಪ್ರವಾಸಗಳಿಂದ ಹೊರಗುಳಿದಿದ್ದರು. ಈ ಬಾರಿ ಪ್ರಯಾಣ ತಂಡವನ್ನು ಸೇರುವ ಅವರ ನಿರ್ಧಾರವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೃದಯಸ್ಪರ್ಶಿ ವಿಡಿಯೊವನ್ನು ಹಂಚಿಕೆ
ಇದರ ನಡುವೆ, ಸಿಎಸ್ಕೆ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳು ಧೋನಿ ತಂಡದೊಂದಿಗೆ ಪ್ರಯಾಣಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿವೆ. ಈ ವಿಡಿಯೋದಲ್ಲಿ ಧೋನಿ ಚೆನ್ನೈನಲ್ಲಿ ಬಸ್ ಹತ್ತುವಾಗ ಅಭಿಮಾನಿಗಳು “ಥಲಾ!” ಎಂದು ಕೂಗಿ ಹುರಿದುಂಬಿಸುವ ದೃಶ್ಯಗಳು ಕಂಡುಬಂದಿವೆ.

ಆರಂಭದಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದ ಚೆನ್ನೈ ತಂಡ ಆ ಬಳಿಕದ ಎರಡೂ ಪಂದ್ಯಗಳನ್ನು ಗೆದ್ದು 4 ಅಂಕದೊಂದಿಗೆ ಸದ್ಯ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. .
MUST WATCH : ಸಚಿವ ಸ್ಥಾನಕ್ಕಾಗಿ ಶಾಸಕರ ಲಾಭಿ- MLA ಗಳ ಪರ ಬ್ಯಾಟ್ ಬೀಸಿದ ಪರಂ




