ಲಕ್ನೋ ವಿರುದ್ಧದ ಪಂದ್ಯದಲ್ಲಿ ಫಿಟ್ನೆಸ್ ಸಮಸ್ಯೆಯ ನಡುವೆಯೂ 49 ರನ್ ಬಾರಿಸಿದ Kohli , ತಾನು ಇನ್ನೂ 100% ಫಿಟ್ ಆಗಿಲ್ಲ ಎಂದು ಹೇಳಿದ್ದಾರೆ.

ಕ್ರಿಕೆಟ್ ಲೋಕದಲ್ಲಿ Kohli ಎಂದರೆ ಉತ್ಸಾಹ ಮತ್ತು ಹೋರಾಟದ ಸಂಕೇತ. ಆದರೆ ಇತ್ತೀಚಿನ ಪಂದ್ಯದಲ್ಲಿ ಅವರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ವಿಚಾರವನ್ನು ಸ್ವತಃ ಬಹಿರಂಗಪಡಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿಯದೆ, ಮೊದಲ ಬಾರಿಗೆ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಕಣಕ್ಕಿಳಿದಿರುವುದು ಗಮನಾರ್ಹವಾಗಿದೆ.

ಆದರೂ, ಅವರ ಬ್ಯಾಟಿಂಗ್ನಲ್ಲಿ ಯಾವುದೇ ಕುಂದಿಲ್ಲ. ಕೇವಲ 34 ಎಸೆತಗಳಲ್ಲಿ 49 ರನ್ ಬಾರಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು.

“ನಾನು ಇನ್ನೂ 100% ಫಿಟ್ ಆಗಿಲ್ಲ” – ಕೊಹ್ಲಿ ಸ್ಪಷ್ಟನೆ
ಪಂದ್ಯ ಮುಗಿದ ಬಳಿಕ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ತಾವು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ತಿಳಿಸಿದ್ದಾರೆ.
ಅವರು ಹೇಳುವಂತೆ , ಕಳೆದ ಪಂದ್ಯದಲ್ಲಿ ಮೊಣಕಾಲು ನೋವು ಕಾಣಿಸಿಕೊಂಡಿತ್ತು ಕಳೆದ 4–5 ದಿನಗಳಿಂದ ಆರೋಗ್ಯದ ಏರುಪೇರಿನಿಂದ ವೈದ್ಯಕೀಯ ತಪಾಸಣೆಯಲ್ಲಿದ್ದರು . ಆದರೂ ತಂಡಕ್ಕಾಗಿ ಮೈದಾನಕ್ಕಿಳಿದು ಉತ್ತಮ ಪ್ರದರ್ಶನ ನೀಡಿರುವುದು ಸಂತೋಷ ತಂದಿದೆ.
ಈ ಹೇಳಿಕೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದರೂ, ಕೊಹ್ಲಿಯ ಹೋರಾಟದ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬದಲಾದ ಪಿಚ್ ಪರಿಸ್ಥಿತಿ – ಕೊಹ್ಲಿ ವಿಶ್ಲೇಷಣೆ
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ಗೆ ಅನುಕೂಲಕರವಾಗಿರುತ್ತದೆ.ಆದರೆ ಈ ಬಾರಿ ಪರಿಸ್ಥಿತಿ ಸ್ವಲ್ಪ ಬದಲಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
ಕೊಹ್ಲಿಯ ಮಾತುಗಳಲ್ಲಿ:
- ಹೆಚ್ಚು ಬಿಸಿಲಿನಿಂದ ಪಿಚ್ ಒಣಗಿತ್ತು
- ಚೆಂಡು ನಿಧಾನವಾಗಿ ಬರುತ್ತಿತ್ತು
- ಆದ್ದರಿಂದ ಆರಂಭದ 5–6 ಓವರ್ಗಳಲ್ಲಿ ಹೆಚ್ಚಿನ ರನ್ ಗಳಿಸುವುದು ನಮ್ಮ ಯೋಜನೆ ಆಗಿತ್ತು
ಈ ತಂತ್ರದ ಪರಿಣಾಮವಾಗಿ ಪವರ್ಪ್ಲೇನಲ್ಲಿ ತಂಡ ಉತ್ತಮ ಅಡಿಪಾಯ ಹಾಕಿಕೊಂಡಿತು.

ರಜತ್ ಪಾಟಿದಾರ್ಗೆ ಕೊಹ್ಲಿ ಮೆಚ್ಚುಗೆ
ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ಬ್ಯಾಟಿಂಗ್ ಬಗ್ಗೆ ವಿರಾಟ್ ಕೊಹ್ಲಿ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಟಿದಾರ್ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಡುವ ರೀತಿ ಅತ್ಯುತ್ತಮವಾಗಿದೆ.
ತಂಡದಲ್ಲಿ ರೊಮಾರಿಯೋ ಶೆಫರ್ಡ್ ಮತ್ತು ಟಿಮ್ ಡೇವಿಡ್ ಅವರಂತಹ ಸ್ಫೋಟಕ ಆಟಗಾರರು ಇರುವುದರಿಂದ, ಯಾವುದೇ ಒತ್ತಡವಿಲ್ಲದೆ ಆತ್ಮವಿಶ್ವಾಸದಿಂದ ಆಡಲು ಸಾಧ್ಯವಾಗುತ್ತಿದೆ.

ಮುಂದಿನ ಪಂದ್ಯಗಳ ಬಗ್ಗೆ ಕೊಹ್ಲಿ ಸಂದೇಶ
ಆಧುನಿಕ ಕ್ರಿಕೆಟ್ನಲ್ಲಿ ಪ್ರತಿಯೊಂದು ಪಂದ್ಯವೂ 230–240 ರನ್ ಗಳಿಸುವ ಪಂದ್ಯವಾಗುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಪಂದ್ಯಾವಳಿಯ ಮುಂದಿನ ಹಂತಗಳಲ್ಲಿ ವೇಗದ ಆಟದ ಜೊತೆಗೆ ಚಾಕಚಕ್ಯತೆ ಮತ್ತು ತಂತ್ರ ಕೂಡ ಮುಖ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪರಿಸ್ಥಿತಿಗೆ ತಕ್ಕಂತೆ ಆಟವನ್ನು ಬದಲಿಸಿಕೊಂಡರೆ ಮಾತ್ರ ತಂಡ ದೀರ್ಘಕಾಲ ಯಶಸ್ಸು ಸಾಧಿಸಬಹುದು ಎಂದು ಕೊಹ್ಲಿ ತಿಳಿಸಿದ್ದಾರೆ.

ತಂಡಕ್ಕೆ ಸ್ಫೂರ್ತಿಯಾದ ಕೊಹ್ಲಿ
ಮೊಣಕಾಲು ನೋವು ಮತ್ತು ಆರೋಗ್ಯ ಸಮಸ್ಯೆಗಳ ನಡುವೆಯೂ ತಂಡಕ್ಕಾಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿಯ ಬದ್ಧತೆ ಅಭಿಮಾನಿಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.ತಾವು ಕೇವಲ 10% ರಿದಮ್ನಲ್ಲಿ ಇದ್ದೇನೆ ಎಂದು ಹೇಳಿದರೂ, ಆ ಪ್ರದರ್ಶನವೇ ಎದುರಾಳಿ ಬೌಲರ್ಗಳಿಗೆ ಸವಾಲಾಗಿ ಪರಿಣಮಿಸಿದೆ.




