
Thamma Trailer Release: ಸ್ಯಾಂಡಲ್ವುಡ್ನಿಂದ ಸಿನಿ ಜಗತ್ತಿಗೆ ಪ್ರವೇಶಿಸಿ, ಟಾಲಿವುಡ್ನಲ್ಲಿ ಜನಪ್ರಿಯತೆ ಪಡೆದು, ಈಗ ಬಾಲಿವುಡ್ನಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಹೊಸ ಹಾರರ್ ಕಥೆಯಲ್ಲಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಇದು ರಶ್ಮಿಕಾಗೆ ಮೊದಲ ಹಾರರ್ ಸಿನಿಮಾ ಆಗಿದ್ದು, ‘ಥಮ್ಮ’ (Thamma) ಎಂಬ ಹೆಸರಿನ ಈ ಚಿತ್ರದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಈ ಚಿತ್ರದ ಟ್ರೈಲರ್ (Trailer) ಬಿಡುಗಡೆಯಾಗಿದೆ. ಚಿತ್ರದಲ್ಲಿ ಬಾಲಿವುಡ್ನ (Bollywood) ಬಹುಮುಖ ನಟ ಆಯುಷ್ಮಾನ್ ಖುರಾನಾ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಅವರಿಬ್ಬರ ಕಾಂಬಿನೇಶನ್ ನ ಮೊದಲ ಸಿನಿಮಾ. ಇನ್ನು ಟ್ರೈಲರ್ನಲ್ಲಿ ಹಾಸ್ಯ, ಭಯ, ಮತ್ತು ರಹಸ್ಯವನ್ನು ಮಿಶ್ರಗೊಳಿಸಿರುವ ಕತೆ, ಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸಿದೆ.
‘ಅನಿಮಲ್’, ‘ಛಾವಾ’ ಹಿಟ್ಗಳ ಬಳಿಕ ರಶ್ಮಿಕಾ ಇದೀಗ ‘ಥಮ್ಮ’ ಮೂಲಕ ಮತ್ತೆ ಥಿಯೇಟರ್ಗಳಲ್ಲಿ ಸೆಳೆತ ಬೀರುವ ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಎಷ್ಟು ಭಯ ಮತ್ತು ಖುಷಿಯನ್ನು ಒಟ್ಟಿಗೆ ತರಲಿದೆ ಎನ್ನುವುದು, ದೀಪಾವಳಿ ದಿನ ಸ್ಪಷ್ಟವಾಗಲಿದೆ. ವಿಶೇಷ ಎಂದರೆ ʼಥಮ್ಮʼದಲ್ಲಿ ರಶ್ಮಿಕಾ ಮತ್ತೊಮ್ಮೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಮರಾಠಿ ಜತೆಗೆ ಹಿಂದಿ ಸಿನಿಮಾಗಳನ್ನು ನಿರ್ದೇಶಿಸಿರುವ ಆದಿತ್ಯ ಸರ್ಪೋತ್ದಾರ್ ಮತ್ತೊಮ್ಮೆ ಹಾರರ್ ಜಾನರ್ನ ಮೊರೆ ಹೋಗಿದ್ದಾರೆ. ಕಳೆದ ವರ್ಷ ತೆರೆಕಂಡ ʼಮುಂಜ್ಯಾʼ ಚಿತ್ರದ ಮೂಲಕ ಬಾಕ್ಸ್ ಆಫೀಸ್ನಲ್ಲಿ ಗಮನ ಸೆಳೆದ ಅವರು ಇದೀಗ ಮತ್ತೊಮ್ಮೆ ಛಾಪು ಬೀರಲು ಮುಂದಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಪರೇಶ್ ರಾವೆಲ್, ಸತ್ಯರಾಜ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ವರುಣ್ ಧವನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲೈಕಾ ಅರೋರ, ನೋರಾ ಫತೇಹಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ರಶ್ಮಿಕಾ ಹಿಂದಿಯ ʼಕಾಕ್ಟೇಲ್ 2ʼ, ತೆಲುಗಿನ ʼದಿ ಗರ್ಲ್ಫ್ರೆಂಡ್ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.




