Bengaluru : ಪ್ರೀತಿಸಿದವಳ ಕಿಡ್ನಾಪ್ ಮಾಡಿ ಅತ್ತೆಗೆ ಚಾಕು ಇರಿತ – ಚಾಕು ಇರಿತದಿಂದ ಗಾಯಗೊಂಡಿದ್ದ ವೃದ್ಧೆ ಸಾವು.

Bengaluru ನಗರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಹೃದಯವಿದ್ರಾವಕ ಘಟನೆಯೊಂದು ನಡೆದುಹೋಗಿತ್ತು. ಪ್ರೀತಿಸಿದ ಯುವತಿಯನ್ನು ಕಿಡ್ನಾಪ್ ಮಾಡಲು ಹೋಗುತ್ತಿದ್ದ ವೇಳೆ ಅತ್ತೆಗೆ ಯುವಕ ಚಾಕು ಇರಿದಿದ್ದ. ಚಾಕು ಇರಿತದಿಂದ ಗಾಯಗೊಂಡಿದ್ದ ಅತ್ತೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿತ್ತು.
READ THIS : ಮೃತಪಟ್ಟ ಬಳಿಕ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ!
ಚಾಕು ಇರಿತದಿಂದ ಗಾಯಗೊಂಡಿದ್ದ ವೃದ್ಧೆಸಾವು
ಮಾಗೇಶ್ವರಿ ಅವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಚಾಕು ಇರಿದ ಆರೋಪಿಯಾದ ಕಿರಣ್ ವೃದ್ಧೆ ಮಾಗೇಶ್ವರಿ ಅವರ ಅಣ್ಣನ ಮಗನಾಗಿದ್ದು, ಅವನಿಗೆ ಈಗಾಗಲೇ ಮದುವೆಯಾಗಿತ್ತು. ಆದರೂ ಕೂಡ ಮಾಗೇಶ್ವರಿ ಸಂಬಂಧಿಯಾದ ಚಾರುಲತಾಳನ್ನು ಕರೆದುಕೊಂಡು ಹೋಗಿ, ಕೆಲ ದಿನಗಳ ನಂತರ ತಂದು ಬಿಟ್ಟು ಹೋಗಿದ್ದ. ಬಳಿಕ ಮಾರ್ಚ್ 25ರಂದು ಚಾರುಲತಾಳನ್ನು ಕಿರಣ್ ಹುಡುಕಿಕೊಂಡು ಮಾಗೇಶ್ವರಿ ಮನೆಗೆ ಬಂದಿದ್ದ.
ಬಳಿಕ ಬಲವಂತವಾಗಿ ಆಕೆಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ತಡೆಯಲು ಬಂದ ಮಾಗೇಶ್ವರಿ ಅವರ ಮೇಲೆ ಆರೋಪಿ ಕಿರಣ್ ಚಾಕುವಿನಿಂದ ಹಲ್ಲೆ ನಡೆಸಿದ್ದ, ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾಗೇಶ್ವರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮಾಗೇಶ್ವರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸದ್ಯ ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನಿಕಿರಣ್, ಅಭಿಷೇಕ್, ಮನಿರಾಜ್, ಮನಿವಣ್ಣನ್ ಎಂಬುವವರನ್ನು ಪೊಲೀಸರು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.
MUST WATCH : ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕುಡುಕರ ಹಾವಳಿ – ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ..!





