
IPL Rajasthan Royals New Coach : ಐಪಿಎಲ್ 2025 ಮುಗಿದಿದ್ದು, 19ನೇ ಆವೃತ್ತಿಗೆ ಕೆಲವೇ ತಿಂಗಳುಗಳು ಬಾಕಿಯಿವೆ. ಇದಕ್ಕೂ ಮುನ್ನವೇ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ನಡೆದಿದ್ದು, ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಕರ್ನಾಟಕದ ಕ್ರೀಡಾಪಟು ರಾಹುಲ್ ದ್ರಾವಿಡ್ಅವರು ತಂಡದ ಮುಖ್ಯ ಕೋಚ್ ಹುದ್ದೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ.
2024ರ ಅಂತ್ಯದ ಹೊತ್ತಿಗೆ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿದ್ದ ದ್ರಾವಿಡ್ ಅವರು, ಆ ಸ್ಥಾನದಿಂದ ಕೆಳಗಿಳಿದ ಬಳಿಕ, ಐಪಿಎಲ್ 2025ರ ಮೊದಲು ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ನೇಮಕಗೊಂಡಿದ್ದರು. ಆದರೆ ಕೇವಲ ಒಂದು ಸೀಸನ್ ನಂತರವೇ ಅವರು ಈ ಸ್ಥಾನವನ್ನು ತ್ಯಜಿಸಿದ್ದಾರೆ.
ಇನ್ನು ದ್ರಾವಿಡ್ ನಿವೃತ್ತಿಯ ನಂತರ, ತಂಡದ ಮಾಜಿ ಕ್ರಿಕೆಟ್ ನಿರ್ದೇಶಕರಾಗಿದ್ದ ಶ್ರೀಲಂಕಾದ ಕುಮಾರ್ ಸಂಗಕ್ಕಾರಅವರನ್ನು ಹೊಸ ಮುಖ್ಯ ಕೋಚ್ಆಗಿ ನೇಮಕ ಮಾಡಲಾಗಿದೆ. ಸಂಗಕ್ಕಾರ 2021ರಿಂದ ತಂಡದ ಕ್ರಿಕೆಟ್ ಚಟುವಟಿಕೆಗಳಲ್ಲಿ ತೊಡಗಿ ಸಿಕೊಂಡಿದ್ದು, ಇದೀಗ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿ ದ್ದಾರೆ.




