
BIGGBOSS KANNADA SHOW SET REVEAL : ನಾಳೆಯಿಂದ (ಸೆಪ್ಟೆಂಬರ್ 28) ಸಂಜೆ 6 ಗಂಟೆಯಿಂದ ಕಲರ್ಸ್ ಕನ್ನಡ ಚಾನಲ್ನಲ್ಲಿ ಕನ್ನಡದ ಬಿಗ್ ಬಾಸ್ 2025 ಶುರುವಾಗಲಿದೆ.
ಈ ಬಾರಿ ಬಿಗ್ ಬಾಸ್ ಸೆಟ್ ಮೈಸೂರಿನ ಅರಮನೆಯ ಥೀಮ್ನಲ್ಲಿ ನಿರ್ಮಾಣ ಗೊಂಡಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಮೈಸೂರಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವಂತೆ ಕಲರ್ಸ್ ಕನ್ನಡ ಸೆಟ್ ವಿನ್ಯಾಸ ರೂಪಿಸಿದೆ. ಈ ಅರಮನೆಯ ಪ್ರೇರಣೆಯಿಂದ ಕಲರ್ಸ್ ಕನ್ನಡ ಬಿಗ್ ಬಾಸ್ ಮನೆ ಯುದ್ಧ, ಬಲ ಮತ್ತು ಸಂಸ್ಕೃತಿ ಕಥೆಯನ್ನು ಹೇಳಲಿದೆ ಎಂದು ನಿರೀಕ್ಷೆ ಇದೆ.
ಕಿಚ್ಚ ಸುದೀಪ್ ಅವರು ಈ ಸೆಟ್ ಕುರಿತು ಹೇಳಿದ್ದು, ನಮ್ಮ ಶ್ರೀಮಂತವಾಗಿರುವ ಕರ್ನಾಟಕವನ್ನು ಒಂದೇ ಜಾಗದಲ್ಲಿ ಸ್ಕೆಚ್ ಮಾಡಿದ್ರೇ, ನೋಡಲಿಕ್ಕೆ ಹೇಗಿರುತ್ತೆ, ಅಂತ ನೋಡಬೇಕು ಅಂದ್ರೆ, ಈಗಿರುತ್ತೆ. ಹೀಗೆ ಅರಮನೆಯನ್ನು ಉಳಿಸಿಕೊಳ್ಳಲಿಕ್ಕೆ ಎಷ್ಟೋ ಯುದ್ದಗಳು ನಡೆದು ಹೋಗಿವೆ. ಈ ಅರಮನೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲಿಕ್ಕೆ ಬಹಳ ಯುದ್ಧಗಳು ನಡೆಯಲಿವೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್ ಬಾಯ್ ಮನೆಯಲ್ಲಿ ಮಸ್ತಿ ಹಬ್ಬ ಈಗ ಶುರು ಎಂದು ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ.
ಕಾಕ್ರೋಚ್ ಸುಧೀ ಭಾಗಿಯಾಗುವ ಬಗ್ಗೆ ನಿನ್ನೆ ವಿಡಿಯೋವೊಂದನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿ ಸುಳಿವು ನೀಡಿದೆ. ಇನ್ನುಳಿದಂತೆ ಬೇರೆ ಯಾರೆಲ್ಲಾ ಭಾಗಿ ಯಾಗುತ್ತಾರೆ ಎಂಬ ಸಸ್ಪೆನ್ಸ್ ಹಾಗೇ ಮುಂದುವರಿದಿದೆ. ನಾಳೆ ಸಂಜೆ 6 ಗಂಟೆಯಿಂದ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಲಿದೆ.




