ಕಿರುತೆರೆ ನಟಿ ಅಂಕಿತಾ ಜಯರಾಮ್ 2nd PUC ಪರೀಕ್ಷೆಯಲ್ಲಿ 97% ಅಂಕ ಗಳಿಸಿ ಸಾಧನೆ ಮಾಡಿದ್ದಾರೆ…

2nd PUC ಫಲಿತಾಂಶ (April 9) ಪ್ರಕಟವಾದ ನಂತರ ಹಲವು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಗಮನ ಸೆಳೆದಿದ್ದಾರೆ. ಅವರಲ್ಲೊಬ್ಬರು ಕಿರುತೆರೆ ನಟಿ ಅಂಕಿತಾ ಜಯರಾಮ್.
ನಟನೆಯ ಜೊತೆಗೆ ಓದಿನಲ್ಲೂ ಗಮನ ಹರಿಸಿ ಅವರು ಶೇ. 97 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವಾಗ ಓದಿನಲ್ಲಿ ಸಾಧನೆ ಮಾಡುವುದು ದೊಡ್ಡ ಸವಾಲು. ಆದರೆ, ಅಂಕಿತಾ ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದಾರೆ.
MUST READ : Chitradurga : ಶಾಲೆಯಲ್ಲೇ ಲೈಂಗಿಕ ದೌರ್ಜನ್ಯ – ವಿದ್ಯಾರ್ಥಿನಿಗೆ ಗರ್ಭಪಾತ ಮಾಡಿಸಿದ ಶಿಕ್ಷಕ..!

ಯಾವ ವಿಷಯಕ್ಕೆ ಎಷ್ಟು ಅಂಕ?
ಅಂಕಿತಾ ಜಯರಾಮ್ ಅವರು ಕಾಮರ್ಸ್ ವಿಭಾಗದಲ್ಲಿ ಓದುತ್ತಿದ್ದು, ಪ್ರತಿಯೊಂದು ವಿಷಯದಲ್ಲೂ ಉತ್ತಮ ಅಂಕಗಳನ್ನು ಪಡೆದಿದ್ದಾರೆ.
ವಿಷಯವಾರು ಅಂಕಗಳು:
- ಕನ್ನಡ – 97
- ಇಂಗ್ಲಿಷ್ – 94
- ಬಿಸಿನೆಸ್ ಸ್ಟಡೀಸ್ – 98
- ಅಕೌಂಟೆನ್ಸಿ – 96
- ಸ್ಟಾಟಿಸ್ಟಿಕ್ಸ್ – 100/100
- ಕಂಪ್ಯೂಟರ್ ಸೈನ್ಸ್ – 94
ಈ ಮೂಲಕ ಒಟ್ಟು 97% ಪರ್ಸೆಂಟೇಜ್ ಗಳಿಸಿ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಯಾರು ಈ ಅಂಕಿತಾ ಜಯರಾಮ್?
ಅಂಕಿತಾ ಜಯರಾಮ್ ಅವರು ಕಿರುತೆರೆ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರು ಹಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಅವರು ನಟಿಸಿರುವ ಪ್ರಮುಖ ಕೃತಿಗಳು:
- ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ
- ‘ಕಾಗದ’ ಸಿನಿಮಾ
- ‘ರುದ್ರ ಅವತಾರ’ ಸಿನಿಮಾ
ಇದೀಗ ಅವರು ಜೀ ಕನ್ನಡ ವಾಹಿನಿಯ ‘ಕರ್ಣ’ ಧಾರಾವಾಹಿಯಲ್ಲಿ ಹೊಸ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಅಂಕಿತಾ ಜಯರಾಮ್ ಅವರು ನಟನೆಯ ಜೊತೆ ಜೊತೆಗೆ ಶಿಕ್ಷಣದಲ್ಲೂ ಉತ್ತಮ ಸಾಧನೆ ಮಾಡಿರುವುದು ಅವರ ಕುಟುಂಬದವರಿಗೆ ಅಪಾರ ಸಂತೋಷ ತಂದಿದೆ.
ಇದೇ ವೇಳೆ, ಅವರ ಈ ಸಾಧನೆಗೆ ಸ್ನೇಹಿತರು, ಅಭಿಮಾನಿಗಳು ಮತ್ತು ಶಿಕ್ಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಶಿಕ್ಷಣ ಮತ್ತು ನಟನೆಯ ಎರಡೂ ಕ್ಷೇತ್ರಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸುವ ನಿರೀಕ್ಷೆ ವ್ಯಕ್ತವಾಗಿದೆ.
MUST WATCH : PUC RESULT ದಿನವೇ ಸ್ಟೂಡೆಂಟ್ ಸಾ* – ಸಾ*ನ ಸುತ್ತ ಹಲವು ಅನುಮಾನಗಳು? | BENGALURU NEWS |




