Tumakuru ರಸ್ತೆ ಫ್ಲೈಓವರ್ನಲ್ಲಿ ಲೋಡ್ ಟೆಸ್ಟಿಂಗ್ ಹಿನ್ನೆಲೆ ಏಪ್ರಿಲ್ 13ರಿಂದ 17ರವರೆಗೆ ಬಂದ್ ಆಗುವ ಸಾಧ್ಯತೆ ಇದೆ.

ಮುಂದಿನ ವಾರ Tumakuru Road ಫ್ಲೈಓವರ್ ಬಂದ್ ಆಗುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಅನುಮತಿ ನೀಡಿದ ನಂತರ ಮಾತ್ರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಸೋಮವಾರ ಬೆಳಗ್ಗೆಯಿಂದ ಶುಕ್ರವಾರದವರೆಗೆ ಫ್ಲೈಓವರ್ ಬಂದ್ ಆಗುವ ಸಾಧ್ಯತೆ ಇದ್ದು, ಇದರಿಂದ ಪ್ರಯಾಣಿಕರು ಮುಂಚಿತವಾಗಿ ಯೋಜನೆ ಮಾಡಿಕೊಳ್ಳುವುದು ಉತ್ತಮ.
MUST READ : PUC ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು!
ಫ್ಲೈಓವರ್ ಬಂದ್ ಯಾಕೆ?
ತುಮಕೂರು ಫ್ಲೈಓವರ್ನಲ್ಲಿ ಅಂತಿಮ ಲೋಡ್ ಪರೀಕ್ಷೆ (Load Testing) ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಿದ್ಧತೆ ನಡೆಸಿದೆ.
ಇತ್ತೀಚೆಗೆ ಫ್ಲೈಓವರ್ಗೆ 1422 ಹೊಸ ಕೇಬಲ್ಗಳನ್ನು ಅಳವಡಿಸಲಾಗಿದೆ. ಆದ್ದರಿಂದ, ಈ ಕೇಬಲ್ಗಳ ಸಾಮರ್ಥ್ಯ ಮತ್ತು ಸುರಕ್ಷತೆಯನ್ನು ಪರೀಕ್ಷಿಸಲು ಲೋಡ್ ಟೆಸ್ಟಿಂಗ್ ನಡೆಸುವುದು ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ NHAI ಈಗಾಗಲೇ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ಯಾವ ದಿನದಿಂದ ಯಾವ ದಿನದವರೆಗೆ ಬಂದ್?
ಪ್ರಸ್ತಾವನೆಗೆ ಅನುಮತಿ ಸಿಕ್ಕರೆ, ಏಪ್ರಿಲ್ 13 ಸೋಮವಾರ ಬೆಳಗ್ಗೆ 11 ಗಂಟೆಯಿಂದ ಏಪ್ರಿಲ್ 17 ಶುಕ್ರವಾರ ಬೆಳಗ್ಗೆ 11 ಗಂಟೆಯವರೆಗೆ..ಒಟ್ಟು 82 ಗಂಟೆಗಳ ಕಾಲ ಫ್ಲೈಓವರ್ ಸಂಪೂರ್ಣವಾಗಿ ಬಂದ್ ಆಗಲಿದೆ.
ಫ್ಲೈಓವರ್ ಬಂದ್ ಆದರೆ, ಗೊರಗೊಂಟೆಪಾಳ್ಯ, ಪೀಣ್ಯ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುವ ಸಾಧ್ಯತೆ ಇದೆ.
ಆದ್ದರಿಂದ, ಈ ಮಾರ್ಗದಲ್ಲಿ ಸಂಚರಿಸುವವರು ಪರ್ಯಾಯ ಮಾರ್ಗಗಳನ್ನು ಬಳಸುವುದು ಉತ್ತಮ.
MUST WATCH : ZOMBIE ಡ್ರಗ್ನಲ್ಲಿ ತೇಲಾಡಿದ ವ್ಯಕ್ತಿ – ವಿಡಿಯೋ ವೈರಲ್ ಮಾಡಿದವರಿಗೆ ವಾರ್ನಿಂಗ್..! | BENGALURU NEWS |




