Bengaluru : ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಅದೇ ರೀತಿಯ ಪ್ರಕರಣವೊಂದು Bengaluru ನಗರದಲ್ಲಿ ಬೆಳಕಿಗೆ ಬಂದಿದೆ. ಹಾಸನ ಮೂಲದ ಲೋಹಿತ್ ಗೌಡ ಮತ್ತು ಮೊಹಮ್ಮದ್ ನಯಾಜ್ ಎಂಬುವರು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿರುವ ಆರೋಪದಡಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
RTO ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಮೋಸ
ಉದಯ್ ಶಂಕರ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಉದಯ್ ಶಂಕರ್ ಅವರಿಗೆ ಸ್ನೇಹಿತನ ಮೂಲಕ ಪರಿಚಯವಾದ ಲೋಹಿತ್ ಗೌಡ, RTO ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಸುಮಾರು 30 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವ್ಯವಹಾರದಲ್ಲಿ ಮೊಹಮ್ಮದ್ ನಯಾಜ್ ಸಹ ಭಾಗಿಯಾಗಿದ್ದು, ಆತನು ಸುಮಾರು 20 ಲಕ್ಷ ರೂಪಾಯಿ ಪಡೆದಿದ್ದಾನೆ ಎನ್ನಲಾಗಿದೆ.

READ THIS : ಹಸು ಶೆಡ್ನಲ್ಲಿ ಭೀಕರ ಅಗ್ನಿ ಅವಘಡ – 6 ಹಸುಗಳ ದಾರುಣ ಸಾವು
ನನಗೆ ದೊಡ್ಡವರ ಪರಿಚಯವಿದೆ
ಇನ್ನು ಆರೋಪಿ ಲೋಹಿತ್ ಗೌಡ ತನ್ನ ಪ್ರಭಾವ ತೋರಿಸಲು ರಾಜಕೀಯ ನಾಯಕರು ಹಾಗೂ ಗಣ್ಯರೊಂದಿಗೆ ತೆಗೆಸಿಕೊಂಡ ಪೋಟೋಗಳನ್ನ ಬಳಸಿ, ನನಗೆ ದೊಡ್ಡವರ ಪರಿಚಯವಿದೆ ಎಂದು ಹೇಳಿ ಜನರನ್ನು ನಂಬಿಸುತ್ತಿದ್ದನಂತೆ. ಅಲ್ದೇ ನಿಮ್ಮ ಮಗನಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಬಡಜನರಿಂದ ಹಣ ವಸೂಲಿ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ.
ವಿವಿಧ ವರ್ಗದ ಸುಮಾರು 40 ಜನರಿಗೆ ವಂಚನೆ
ಕಳೆದ 2019 ರಿಂದಲೂ ಈತ ಕೂಲಿ ಕಾರ್ಮಿಕರಿಂದ ಹಿಡಿದು ವಿವಿಧ ವರ್ಗದ ಸುಮಾರು 40 ಜನರಿಗೆ ವಂಚನೆ ಮಾಡಿದ್ದಾನೆ ಎನ್ನಲಾಗ್ತಿದೆ. ಸದ್ಯ ಆರೋಪಿಗಳ ವಿರುದ್ಧ ಜ್ಞಾನಭಾರತಿ, ವಿವಿ ಪುರಂ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

MUST WATCH : ಬೆಂಗಳೂರು ಪೊಲೀಸರ ಭರ್ಜರಿ ರೇಡ್ – ಐವರು ಡ್ರಗ್ ಪೆಡ್ಲರ್ಗಳು ಅಂದರ್




