NAMMA METRO YELLOW LINE : ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಹಳದಿ ಮಾರ್ಗ ದಲ್ಲಿ (ಆರ್.ವಿ ರಸ್ತೆ – ಬೊಮ್ಮಸಂದ್ರ) ಸಂಚರಿಸುತ್ತಿರುವ ಮೆಟ್ರೋ ಮಾರ್ಗಕ್ಕೆ ಸೆಪ್ಟೆಂಬರ್ ಅಂತ್ಯದೊಳಗೆ ಮತ್ತೊಂದು ಹೊಸ ರೈಲು ಸೇರಲಿದೆ. ಈ ಹೊಸ ಕೋಚ್ಗಳ ಸೇರ್ಪಡೆ ನಂತರ, ಅಕ್ಟೋಬರ್ 2 ಅಥವಾ 3ನೇ ವಾರದೊಳಗೆ ಸಂಚಾರ ಆರಂಭಿಸುವ ಸಾಧ್ಯತೆಯಿದೆ.
ಈವರೆಗೆ ಈ ಮಾರ್ಗದಲ್ಲಿ ಪ್ರತಿ 19 ನಿಮಿಷಕ್ಕೆ ಮಾತ್ರ ಒಂದು ರೈಲು ಸಂಚರಿಸುತ್ತಿತ್ತು. ಹೊಸ ರೈಲುಗಳ ಸೇರ್ಪಡೆಯಿಂದ ಪ್ರತಿ 15 ನಿಮಿಷಕ್ಕೆ ರೈಲು ಲಭ್ಯವಾಗಲಿದ್ದು, ನಿಲ್ದಾಣಗಳಲ್ಲಿ ಕಾಯುವ ಸಮಯ ಶ್ರಮಿಸುತ್ತದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಹೊಸ ರೈಲು ಹಡಗುಗಳು ಪಶ್ಚಿಮ ಬಂಗಾಳದ ತಿಟಾಗಢ ರೈಲ್ವೆ ಕಾರ್ಖಾನೆಯಿಂದ ಹೊರಟಿದ್ದು, ಬೇಗನೇ ಹೆಬ್ಬಗೋಡಿಯ ಲ್ಲಿನ ನಮ್ಮ ಮೆಟ್ರೋಗೆ ತಲುಪಲಿವೆ. ಅಲ್ಲಿ ಪ್ರಾಥಮಿಕ ಪರೀಕ್ಷೆ ಹಾಗೂ ತಾಂತ್ರಿಕ ಪರಿಶೀಲನೆಗಳ ನಂತರ ಸೇವೆಗೆ ನಿಯೋಜನೆ ಮಾಡಲಾಗುವುದು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10ರಂದು ಈ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. ಆಗಸ್ಟ್ 11ರಿಂದ ಆರ್.ವಿ ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರ ಆರಂಭಗೊಂಡಿತ್ತು. ಈಗ ಐದನೇ ರೈಲು ಸೇರ್ಪಡೆಯಾಗಿ ಪ್ರಯಾಣದ ಅನುಭವವನ್ನು ಮತ್ತಷ್ಟು ಸುಲಭ ಗೊಳಿಸಲು ಮೆಟ್ರೋ ತಯಾರಾಗುತ್ತಿದೆ.