
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ಹೈದರಾಬಾದ್ ಮೂಲದ ಸಂಶೋಧನಾ ಕೇಂದ್ರದಲ್ಲಿ 195 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಪ್ರಕ್ರಿಯೆ ನಾಳೆ, ಸೆಪ್ಟೆಂಬರ್ 27, 2025 ರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 28, 2025 ರವರೆಗೆ ಸಲ್ಲಿಸಬಹುದು.
ಹುದ್ದೆಗಳ ವಿವರ:
- ಗ್ರಾಜುಯೇಟ್ ಅಪ್ರೆಂಟಿಸ್: 40 ಹುದ್ದೆಗಳು (ಮೆಕ್ಯಾನಿಕಲ್, ಕೆಮಿಕಲ್ ಸೇರಿದಂತೆ ಸಂಬಂಧಿತ ಎಂಜಿನಿಯರಿಂಗ್ ಪದವೀಧರಿಗೆ)
- ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್: 20 ಹುದ್ದೆಗಳು (ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಅಗತ್ಯ)
- ಐಟಿಐ ಟ್ರೇಡ್ ಅಪ್ರೆಂಟಿಸ್: 135 ಹುದ್ದೆಗಳು (ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್, ಮೆಕ್ಯಾನಿಕ್-ಡೀಸೆಲ್, ಡ್ರಾಫ್ಟ್ಸ್ಮನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಸಿಒಪಿಎ, ಲೈಬ್ರರಿ ಅಸಿಸ್ಟೆಂಟ್)
ಅರ್ಹತೆ ಮತ್ತು ವಯೋಮಿತಿ:
- ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಸಂಬಂಧಿತ ಎಂಜಿನಿಯರಿಂಗ್ ಪದವಿ ಅಗತ್ಯ.
- ಟೆಕ್ನಿಷಿಯನ್ ಹುದ್ದೆಗಳಿಗೆ ಡಿಪ್ಲೊಮಾ ಮತ್ತು ಐಟಿಐ ಹುದ್ದೆಗಳಿಗೆ ಸಂಬಂಧಿತ ಟ್ರೇಡ್ ಪ್ರಮಾಣಪತ್ರ.
- ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 18 ವರ್ಷ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಲಭ್ಯ.
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆ ಮತ್ತು ತಾಂತ್ರಿಕ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳಿಂದ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಸ್ಟೈಫಂಡ್:
- ಪದವೀಧರ ಅಪ್ರೆಂಟಿಸ್ – ತಿಂಗಳಿಗೆ ₹9,000
- ಡಿಪ್ಲೊಮಾ/ಐಟಿಐ ಅಪ್ರೆಂಟಿಸ್ – ತಿಂಗಳಿಗೆ ₹8,000
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್: drdo.gov.in




